ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಲೂ ದರ ಏರಿಕೆ ರೈತರ ಸ್ಥಿತಿ ಅತಂತ್ರ

Rashmi Kasaragodu
Updated On : 15 May 2014, 1:09 am

 ಪಿ. ರವಿಕುಮಾರ್
ಕ.ಪ್ರ.ವಾರ್ತೆ    ಹಾಸನ    ಮೇ 14
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ. ಅತಿಶಯದ ಸಂಗತಿ ಅಂದ್ರೆ ಇಡೀ ರಾಜ್ಯದಲ್ಲಿ ಅತಿ ಹೆಚ್ಚಿನ ಆಲೂಗಡ್ಡೆ ಬೆಳೆಯುವ ಜಿಲ್ಲೆ ಎಂದರೆ ಅದು ಹಾಸನ. ಆದರೆ ಪ್ರಸ್ತುತ ಆಲೂಗಡ್ಡೆ ದರ ನಿಗದಿಯಾಗಿದ್ದರೂ, ವರ್ತಕರು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದರಿಂದ ರೈತರು ಅತಂತ್ರರಾಗಿದ್ದಾರೆ.
ಮಳೆಗಾಲದಲ್ಲಿ ರಾಜ್ಯದ 30 ಜಿಲ್ಲೆಗಳ ಪೈಕಿ ಅತಿ ಹೆಚ್ಚು ಆಲೂಗಡ್ಡೆ ಬೆಳೆಯುವ ಜಿಲ್ಲೆ ಎಂದರೆ ಹಾಸನ. ನಮ್ಮ ಜಿಲ್ಲೆ ಬಿಟ್ಟರೆ ಕೋಲಾರ, ಬೆಂಗಳೂರು, ಧಾರವಾಡ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯುತ್ತಾರೆ. ಆದರೆ ಅದು ಇಂತಿಷ್ಟು ಎಕರೆಗೆ ಮಾತ್ರ ಸೀಮಿತವಾಗಿದೆ. ಕಳೆದ ಆರೇಳು ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಒಟ್ಟಾರೆ ರೈತರ ಪೈಕಿ ಹೆಚ್ಚು ಕಡಿಮೆ ಶೇಕಡ ಅರ್ಧದಷ್ಟು ರೈತರು ಆಲೂಗಡ್ಡೆ ಬೆಳೆಯುತ್ತಿದ್ದರು. ಅಂದರೆ ಜಿಲ್ಲೆಯಲ್ಲಿ 1.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡುತ್ತಾರೆ. ಈ ಪೈಕಿ ಶೇ. 60ಕ್ಕೂ ಹೆಚ್ಚು ರೈತರು ಆಲೂಗಡ್ಡೆ ಬೆಳೆಯುತ್ತಿದ್ದರು. ಇಲ್ಲಿ ಬೆಳೆದ ಆಲೂಗಡ್ಡೆ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ರಫ್ತಾಗುತ್ತಿತ್ತು. ನಮ್ಮ ಜಿಲ್ಲೆಯ ರೈತರು ಲಕ್ಷಾಂತರ ರು. ಆದಾಯ ಹೊಂದುತ್ತಿದ್ದರು.
ಅಂಗಮಾರಿ ಕಾಟ: ಒಂದು ಕಾಲದಲ್ಲಿ 50 ಸಾವಿರಕ್ಕೂ ಹೆಚ್ಚಿನ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದರು. ಆದರೆ ಇಂದು ಆ ಪ್ರಮಾಣ ಕೇವಲ 20 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಇದಕ್ಕೆ ಮೂಲ ಕಾರಣ ಹಾಳು ಅಂಗಮಾರಿ ರೋಗ. ಆರೇಳು ವರ್ಷಗಳಿಂದ ಕಾಣಿಸಿಕೊಂಡ ಅಂಗಮಾರಿ ಮಾರಿ ಈಗಲೂ ಜಿಲ್ಲೆಯ ಆಲೂಗಡ್ಡೆ ಬೆಳೆಯುವ ರೈತರನ್ನು ಬಾಧಿಸುತ್ತಲೇ ಇದೆ.
ಜೊತೆಗೆ ಬಿತ್ತನೆ ಆಲೂಗಡ್ಡೆಯ ಗುಣಮಟ್ಟದ ಕೊರತೆಯಿಂದ ರೈತರ ಬೆಳೆ ನಾಶವಾಗುತ್ತಿದೆ. ಆದರೂ ಆಲೂ ಬೆಳೆಯಲು ಮುಂದಾಗಿರುವ ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಾರಾಟ ಮಾಡುತ್ತಿರುವಂತಹ ಆಲೂಗಡ್ಡೆ ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ರೈತರು ಕೊಂಡೊಯ್ಯದಂತಹ ಆಲೂಗಡ್ಡೆ ಕರಗಿ ನೀರಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡು ಹಲವು ವರ್ಷಗಳೇ ಕಳೆದಿದ್ದರೂ, ರೋಗಕ್ಕೆ ಮಾರ್ಗೋಪಾಯ ಕಂಡು ಹಿಡಿದಿಲ್ಲ. ಈ ಬಗ್ಗೆ ಅನೇಕ ಸಂಶೋಧನೆ ನಡೆದರೂ ಯಾವುದೇ ಲಾಭವಾಗಿಲ್ಲ.
ರೈತರು ಅತಂತ್ರ: ಜಿಲ್ಲಾಡಳಿತವು ವರ್ತಕರೊಂದಿಗೆ ಸಭೆ ನಡೆಸಿ ದರವನ್ನು ತೀರ್ಮಾನ ಮಾಡಿ ರು. 1900ನಿಂದ 2000 ಒಳಗೆ ಆಲೂಗಡ್ಡೆ ಮಾರಾಟ ಮಾಡುವಂತೆ ತೀರ್ಮಾನ ಮಾಡಿದ್ದರು ಸಹ ಎಪಿಎಂಸಿ ಯಲ್ಲಿ ಆಲೂಗಡ್ಡೆ ವರ್ತಕರು ರು. 2200 ಮುಖಬೆಲೆಗೆ ಆಲೂಗಡ್ಡೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರು ಆಲೂಗಡ್ಡೆ ಬೆಳೆ ಕೈಬಿಡುವಂತಾಗಿದೆ.
ಬೇಡಿಕೆ ಹೆಚ್ಚಾದಂತೆ, ಆಲೂ ವರ್ತಕರು ಬಿತ್ತನೆ ಆಲೂ ಬೆಲೆ ಏರಿಸಿದ್ದು ಪ್ರತಿಭಟನೆಗೂ ಕಾರಣವಾಯಿತು. ಒಟ್ಟಾರೆಯಾಗಿ, ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯುವ ರೈತರ ಪರಿಸ್ಥಿತಿ ಸರಿಯಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement