ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಈಗಿರುವ ಜಾಗದಲ್ಲೇ ಸಂಗೀತ ವಿವಿ ಅಭಿವೃದ್ಧಿ

Rashmi Kasaragodu
Updated On : 15 May 2014, 1:12 am

ಮೈಸೂರು: ಈಗಿರುವ ಜಾಗದಲ್ಲಿಯೇ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸಂಯುಕ್ತಾಶ್ರದಲ್ಲಿ ಬುಧವಾರ ಏರ್ಪಡಿಸಿದ್ದ ಜನಪದ ಸಂಗೀತದ ಸಾಂಸ್ಕೃತಿಕ ಮಹತ್ವ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ವಿವಿಗೆ ಬೇರೆ ಕಡೆ ಜಾಗ ಕೊಡಿಸುವಂತೆ ಮನವಿ ಬಂದಿದೆ. ಜಾಗ ನೀಡುವುದು ದೊಡ್ಡ ವಿಷಯವಲ್ಲ. ಆದರೆ, ಬೇರೆ ಜಾಗ ಹುಡುಕಿ ಕಟ್ಟಡ ಕಟ್ಟುವುದಕ್ಕೆ ಸಮಯ ಹಿಡಿಯುತ್ತದೆ. ಅದರ ಬದಲು ಇದೇ ಜಾಗ ಉತ್ತಮವಾಗಿದೆ. ಈ ಕಟ್ಟಡದಲ್ಲಿ ಎಚ್.ವೈ. ಶಾರದಾಪ್ರಸಾದ್ ಅಂತಹವರು ವಿದ್ಯಾಭ್ಯಾಸ ಮಾಡಿದ್ದಾರೆ. ನಗರದ ಮಧ್ಯದಲ್ಲಿರುವುದರಿಂದ ಇಲ್ಲಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ವಿವಿಯನ್ನು ವಿಸ್ತರಿಸಲಾಗುವುದು. ನಾಳಿನ ಸಚಿವ ಸಂಪುಟ ಸಭೆಯಲ್ಲಿ ಈ ಕಟ್ಟಡವನ್ನು ಶಾಶ್ವತವಾಗಿ ಸಂಗೀತ ವಿವಿಗೆ ನೀಡುವಂತೆ ಪ್ರಾಥಮಿಕ ಶಿಕ್ಷಣ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವರ ಜತೆ ಮಾತನಾಡುತ್ತೇನೆ ಎಂದರು. ಸಂಗೀತ ವಿವಿ ಕುಲಪತಿ ಡಾ.ಸರ್ವಮಂಗಳ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ, ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ, ಕುಲಸಚಿವರಾದ ಪ್ರೊ.ವೈ.ಎಸ್. ಸಿದ್ದೇಗೌಡ, ಪ್ರೊ.ಎಂ.ಎಸ್. ಶೇಖರ್, ಅಕಾಡೆಮಿ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ ಇದ್ದರು.
ಬಳಿಕ ಮಂಡ್ಯದ ತಂಬೂರಿ ಜವರಯ್ಯ ತಂಡವು ತತ್ವಪದ ಗಾಯನ, ಬನ್ನೂರು ಕೆಂಪಮ್ಮ ಅವರು ಜನಪದ ಗೀತೆ, ಕುಮಾರಸ್ವಾಮಿ ತಂಡ ಕಂಸಾಳೆ ಪದ, ಮಹಾದೇವು ಹಳೇಪುರ ಅವರು ನೀಲಗಾರರ ಪದಗಳನ್ನು ಹಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement