ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆಗೆ ಆಲೂರು ಪ್ರಥಮ

Rashmi Kasaragodu
Updated On : 15 May 2014, 1:12 am

ಆಲೂರು: ಈ ಬಾರಿ ತಾಲೂಕು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪುಷ್ಪಲತಾ ತಿಳಿಸಿದರು.
ಫಲಿತಾಂಶ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಶೇ. 94.18 ಅನುದಾನಿತ ಶಾಲೆಗಳಲ್ಲಿ ಶೇ. 94.25 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ  ಶೇ. 93.81ರಷ್ಟು ಫಲಿತಾಂಶ ಬಂದಿದೆ.
ಅವುಗಳ ಪೈಕಿ 5 ಸರ್ಕಾರಿ ಶಾಲೆಗಳಲ್ಲಿ 32 ಡಿಸ್ಟಿಂಕ್ಷನ್, ಅನುದಾನಿತ 5 ಶಾಲೆಗಳಲ್ಲಿ 4 ಡಿಸ್ಟಿಂಕ್ಷನ್ ಹಾಗೂ ಅನುದಾನ ರಹಿತ 1 ಶಾಲೆಯಲ್ಲಿ 21 ಡಿಸ್ಟಿಂಕ್ಷನ್ ಸೇರಿದಂತೆ 57 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಒಟ್ಟು 11 ಶಾಲೆಗಳಲ್ಲಿ ಶೇ 100 ರಷ್ಟು ಫಲಿತಾಂಶ ಬಂದಿದೆ ಎಂದ ಅವರು. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಬಿ.ಆರ್.ಸಿ, ಟಿ.ಪಿ.ಒ, ಎ.ಇ.ಇ ಹಾಗೂ ಎಲ್ಲಾ ಮುಖ್ಯ ಉಪಾಧ್ಯಾಯರಿಗೂ ಅಭಿನಂದನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement