ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ
ಹಾಸನ: ಮೆಡಿಕಲ್ ಶಾಪ್ ಮೇಲೆ ದಾಳಿ ನಡೆಸಿದ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಯು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ನಾಲ್ವರನ್ನು ಬಂಧಿಸಿದ್ದು, ರು. 65,105 ನಗದು, ಒಂದು ಟಿವಿ ಹಾಗೂ 3 ಮೊಬೈಲ್ ವಶಪಡಿಸಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ನಗರದ ಹೊಳೆನರಸೀಪುರ ರಸ್ತೆ, ರೇಲ್ವೆ ಗೇಟ್ ಹತ್ತಿರವಿರುವ ಮಂಜುನಾಥ ಮೆಡಿಕಲ್ಸ್ನಲ್ಲಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದಾಗ ಈ ದಾಳಿ ನಡೆಸಲಾಗಿದೆ.
ಮೆಡಿಕಲ್ಸ್ನಲ್ಲಿ ಕೆಲಸ ಮಾಡುವ ಯರೇಹಳ್ಳಿ ಗ್ರಾಮದ ರಘು (25), ತಟ್ಟೇಕೆರೆ ಗ್ರಾಮದ ರಾಜು (34), ಬಿಟ್ಟಗೌಡನಹಳ್ಳಿಯ ಗೌರಿಶಂಕರ (25), ಆಂಜನೇಯ ಗ್ರಾಮದ ಜಯಚಂದ್ರ (30) ಎಂಬುವರೇ ಬಂಧಿತ ಆರೋಪಿಗಳು. ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಆಟವಾಡಲು ಪಣವಾಗಿಟ್ಟಿದ್ದ ರು. 65,105 ನಗದು, 3 ಮೊಬೈಲ್ ಮತ್ತು ಒಂದು ಟಿ.ವಿ.ಯನ್ನು ವಶಪಡಿಸಿಕೊಳ್ಳಲಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.