ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗೋ ಸಂತತಿ ಸಂರಕ್ಷಣೆಗೆ 'ಕೈ' ಸರ್ಕಾರ ತಾರತಮ್ಯ: ಮಿತ್ತಲ್

Rashmi Kasaragodu
Updated On : 16 May 2014, 1:19 am

ಅರಸೀಕೆರೆ: ಹಿಂದಿನ ಬಿಜೆಪಿ ಸರ್ಕಾರ ಗೋ ಸಂತತಿ ಸಂರಕ್ಷಣೆಗಾಗಿ ಬಜೆಟ್‌ನಲ್ಲಿ ರು. 22 ಕೋಟಿ ನೀಡಿತ್ತು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆ ಮಾಡದೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಗೋ ಸೇವಾ ಆಯೋಗದ ಸದಸ್ಯ ಡಾ.ಎಸ್.ಕೆ.ಮಿತ್ತಲ್ ವಿಷಾದಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 1.5 ಕೋಟಿ ಜಾನುವಾರುಗಳು ಇದ್ದು, ಇವುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣ ದಲ್ಲಿ ಇಳಿಮುಖ ಆಗುತ್ತಿರುವುದು ಆತಂಕಕಾರಿ ಬೆಳೆವಣಿಗೆಯಾಗಿದೆ ಎಂದರು.ಕೆಲವರು ಆಕ್ರಮವಾಗಿ ಸಾವಿರಾರು ಗೋವುಗಳನ್ನು ಕೇರಳದ ಕಸಾಯಿಖಾನೆಗಳಿಗೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ಪ್ರತಿವರ್ಷ ಲಕ್ಷಾಂತರ ಗೋ ಸಂತತಿ ನಾಶವಾಗುತ್ತಿದೆ ಎಂದು ಅವರು ಆರೋಪಿಸಿದರು.ಈ ಸಂಬಂಧ ತಾವು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೆಲವು ದಾಖಲೆಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಇಂತಹ ಆಕ್ರಮ ಕಾರ್ಯಗಳು ನಡೆದಿರುವುದು ಬೆಳಕಿಗೆ ಬಂದಿದ್ದು, ಅರಸೀಕೆರೆ ತಾಲೂಕಿನ ಗಂಡಸಿ, ಕಲ್ಲುಸಾದರಹಳ್ಳಿ ಹಾಗೂ ಪಟ್ಟಣದಲ್ಲಿ ಬುಧವಾರ ನಡೆಯುವ ಜಾನುವಾರುಗಳ ಸಂತೆಯಲ್ಲಿ ಮಾರಾಟವಾಗಿದ್ದ ಜಾನುವಾರುಗಳಿಗೆ ಕಳೆದ ಮೂರು ತಿಂಗಳ ಅವಧಿಯಲ್ಲಿ ತಾಲೂಕಿನ ಗಂಡಸಿ ಗ್ರಾಮದ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎ.ಪರ್ವಿನ್ ಎಂಬುವರ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರದ 500ಕ್ಕೂ ಹೆಚ್ಚು ದಾಖಲೆಗಳನ್ನು ಸೃಷ್ಟಿಸಿಕೊಂಡು ಜಾನುವಾರುಗಳನ್ನು ಆಕ್ರಮವಾಗಿ ಪ್ರತಿ ತಿಂಗಳು 2 ಸಾವಿರಕ್ಕೂ ಹೆಚ್ಚಿನ ಜಾನುವಾರುಗಳನ್ನು ಕೇರಳಕ್ಕೆ ಸಾಗಾಣಿಕೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಈ ಪ್ರಕರಣವನ್ನು ಗಂಡಸಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದರು.ಮೈಸೂರಿನ ಪಿಂಜರಾ ಪೋಲ್ ಗೋ ಶಾಲೆ ಸೊಸೈಟಿ ಅಧ್ಯಕ್ಷ ಬಿಕಂಚಂದ್, ಮಹೇಂದ್ರಕುಮಾರ್, ಅರಸೀಕೆರೆ ಸಮೀಪದ ಮಹಾವೀರ ಗೋಶಾಲೆ ಮುಖ್ಯಸ್ಥ ಪಾರಸ್ ಇನ್ನಿತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement