ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುಣ್ಯಭೂಮಿಸಂಸ್ಥೆಗೆ 'ಸಾಧಕ ಕೃಷಿ ಸಂಸ್ಥೆ' ಪ್ರಶಸ್ತಿ

Rashmi Kasaragodu
Updated On : 16 May 2014, 1:17 am

ಹಾಸನ: ಜೈವಿಕ ಕೃಷಿ ಕುರಿತು ಪ್ರಯೋಗಗಳನ್ನು ಕೈಗೊಂಡು ಜನಪ್ರಿಯಗೊಳಿಸುವಲ್ಲಿ ಕಾರ್ಯ ಮಾಡುತ್ತಿರುವ ಆಲೂರು ಬಳಿಯ ಪುಣ್ಯಭೂಮಿ ಸಂಸ್ಥೆಗೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮಠದೇವಳದ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ವತಿಯಿಂದ ಇತ್ತೀಚೆಗೆ  ನಡೆದ ಕೃಷಿ ಜಯಂತಿ-2014 ಸಮಾರಂಭದಲ್ಲಿ ಕೃಷಿ ಸಾಧಕ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಸಂಸದ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರಹೆಗಡೆ ಕಾಗೇರಿ ಮತ್ತಿತರರು ಭಾಗವಹಿಸಿದ್ದರು. ಪುಣ್ಯಭೂಮಿ ಗೌರವಾಧ್ಯಕ್ಷ ಜಿ.ಎಸ್.ಗಿಡ್ಡೇಗೌಡ ಸಂಸ್ಥೆ ಪ್ರತಿನಿಧಿಸಿ ಪ್ರಶಸ್ತಿ ಸ್ವೀಕರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement