ಹಳ್ಳಿಮೈಸೂರು ಶಾಲೆಗೆ ಶೇ.100 ಫಲಿತಾಂಶ
ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಗ್ರಾಮಾಂತರ ವಿಭಾಗದ ಅನುಗ್ರಹ ಆಂಗ್ಲಮಾಧ್ಯಮ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಶೇ.100 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಕುಳಿತ ಒಟ್ಟು 39 ವಿದ್ಯಾರ್ಥಿಗಳಲ್ಲಿ 15 ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಪ್ರಸನ್ನ ಗಣಪತಿ ಶೇ.95, ಕಾವ್ಯ ಕೆ.ಎಸ್.ಶೇ.94, ಹರ್ಷಿತಾ ಎ.ಕೆ. ಶೇ.94, ಅಂಕಿತ ಎ.ಎಂ. ಶೇ. 92, ಮೇಘ ಎಸ್.ಕೆ. ಶೇ.92, ಪ್ರಜ್ವಲ್ ಎಸ್.ಪಿ. ಶೇ.92, ಪ್ರಣವಗೌಡ ಎಚ್.ಎ. ಶೇ. 92, ಸುಬ್ರಹ್ಮಣ್ಯ ಎಸ್.ಕೆ. ಶೇ.92, ಸುಹಾಸ್ ಎಸ್.ಟಿ.ಶೇ.92, ಚೈತ್ರ ಎಸ್.ಟಿ. 92, ಚಂದನ ಜಿ.ಎಲ್. ಶೇ.91, ಚಂದನ್ ಎಸ್.ಎನ್. ಶೇ. 90, ಕಾವ್ಯಶ್ರೀ ಎಂ.ಎಸ್. ಶೇ.88, ಸುನಿಲ್ ಎಸ್.ಎಂ. ಶೇ.88, ಹರ್ಷಿತಾ ಬಿ.ಜಿ. ಶೇ.87, ಅಂಕಗಳಿಸಿದ್ದು ಉಳಿದಂತೆ 22 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಹಾಗೂ ಇಬ್ಬರು ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.