ಹೊಸಳ್ಳಿ ಪ್ರೌಢಶಾಲೆಗೆ ಶೇ.96 ಫಲಿತಾಂಶ
ಹಾಸನ: ತಾಲೂಕಿನ ಅರೇಕಲ್ ಹೊಸಳ್ಳಿ ಸತ್ಯನಾರಾಯಣ ಪ್ರಸನ್ನ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96.4 ರಷ್ಟು ಫಲಿತಾಂಶ ಲಭಿಸಿದೆ. ಶಾಲೆಯಿಂದ ಒಟ್ಟು 56 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 54 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.