ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜನ'ಮತ' ಯಾರಿಗೆ ಎಷ್ಟು?

Rashmi Kasaragodu
Updated On : 16 May 2014, 11:36 am

ಕ.ಪ್ರ.ವಾರ್ತೆ    ಹಾಸನ    ಮೇ 16
ಹಾಸನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ. ಬಿಎಸ್ಪಿಯ ಎ.ಪಿ. ಅಹಮದ್ 18,905, ಜೆಡಿಎಸ್‌ನ ಎಚ್.ಡಿ.ದೇವೇಗೌಡ-5,09,841, ಕಾಂಗ್ರೆಸ್‌ನ ಎ.ಮಂಜು-4,09,379,  ಬಿಜೆಪಿಯ ಸಿ.ಎಚ್.ವಿಜಯಶಂಕರ್-1,65,688, ಅಮ್ ಆದ್ಮಿಯ ಸಂತೋಷ್ ಮೋಹನ್-8018, ಪಕ್ಷೇತರ ಅಭ್ಯರ್ಥಿಗಳಾದ ಮಂಜುನಾಥ-3536, ರುದ್ರೇಗೌಡ-3262, ಎಚ್.ಡಿ.ರೇವಣ್ಣ-6798, ಟಿ.ಡಿ.ಜಗದೀಶ-2083, ಜವರಯ್ಯ-1581, ಡಾ.ಭಾನುಪ್ರಕಾಶ್.ಕೆ.-1456, ಎಸ್.ಎನ್.ಮಲ್ಲಪ್ಪ-2388, ಎಂ.ಮಹೇಶ್-3062, ಎಸ್.ಬಿ.ರಾಜೇಗೌಡ-3841 ಮತ ಪಡೆದಿದ್ದಾರೆ.


ಚಲಾವಣೆಗೊಂಡ ಮತ


11,47,534


ಅಂಚೆ ಮತ

1026
ನೋಟಾ


7334


ತಿರಸ್ಕೃತ ಮತ


362


ಸುಶಿಕ್ಷಿತರ ಮತ ತಿರಸ್ಕೃತ!
83 ಸೇವಾ ಮತದಾರರೂ ಸೇರಿದಂತೆ 1026 ಅಂಚೆ ಮತಗಳು ಸ್ವೀಕೃತವಾಗಿದ್ದು, ಅದರಲ್ಲಿ 362 ಮತಗಳು ತಿರಸ್ಕತಗೊಂಡಿವೆ. ಇವೆಲ್ಲಾ ಸುಶಿಕ್ಷಿತರು ಹಾಗೂ ಸೇವೆಯಲ್ಲಿರುವವರು ಹಾಕಿರುವ ಮತಗಳಾಗಿವೆ.ಇವರಲ್ಲಿ 3 ಮಂದಿ ನೋಟ ಹಕ್ಕು ಚಲಾಯಿಸಿದ್ದಾರೆ. ಪುರಸ್ಕೃತಗೊಂಡಿರುವ ಅಂಚೆ ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಅವರಿಗೆ ಅತ್ಯಧಿಕ 272 ಮತ, ದೇವೇಗೌಡರಿಗೆ 240, ಎ.ಮಂಜು ಅವರಿಗೆ 139 ಮತಗಳು ಲಭ್ಯವಾಗಿವೆ. ಎ.ಪಿ. ಅಹಮದ್ ಅವರಿಗೆ 3, ಮಂಜುನಾಥ-2, ಸಂತೋಷ್ ಮೋಹನ್-4, ಎಸ್.ಎನ್.ಮಲ್ಲಪ್ಪ-1, ಮತ ಹಂಚಿಕೆಯಾಗಿದೆ.


ನೋಟಾ ಅಚ್ಚರಿ ನೋಟ!
ಇದೇ ಮೊದಲ ಬಾರಿಗೆ ಭಾರತ ಚುನಾವಣಾ ಆಯೋಗ ರಾಜ್ಯದ ಜನತೆಗೆ ಪರಿಚಯಿಸಿದ ಈ ಮೇಲಿನವರ್ಯಾರೂ ಅಲ್ಲ ಎಂಬ ಮತ ಆಯ್ಕೆ ಅವಕಾಶಕ್ಕೆ ಸಾಕಷ್ಟು ಮಂದಿ ಆಕರ್ಷಿತರಾಗಿದ್ದಾರೆ. 7,334 ಮತದಾರರು ನೋಟಾ ಬಟನ್ ಅದುಮಿ ಮತ ಚಲಾಯಿಸಿದ್ದಾರೆ.


ಅಚ್ಚುಕಟ್ಟು ವ್ಯವಸ್ಥೆ
ಕಳೆದೆಲ್ಲಾ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮತ ಎಣಿಕೆ ಇನ್ನಷ್ಟು ಅತ್ಯಂತ ಅಚ್ಚುಕಟ್ಟಾಗಿ ನಡೆದಿದೆ. ಯಾವುದೇ ಗೊಂದಲಗಳಿಲ್ಲದಂತೆ ಸುಸೂತ್ರವಾಗಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪ್ರತಿ ವಿಧಾನಸಭಾಕ್ಷೇತ್ರಕ್ಕೆ ಪ್ರತ್ಯೇಕ ಕೊಠಡಿ, 14 ಟೇಬಲ್‌ಗಳಲ್ಲಿ ಮತ ಎಣಿಕೆ ವ್ಯವಸ್ಥೆ ಮಾಡಲಾಗಿತ್ತು. ಮತ ಎಣಿಕೆ ಕೇಂದ್ರದಲ್ಲಿದ್ದ ಎಲ್ಲರಿಗೂ ಅತ್ಯುತ್ತಮವಾದ ತಿಂಡಿ, ಊಟೋಪಚಾರ ಇತ್ತು.


ವ್ಯವಸ್ಥಿತ ಮಾಧ್ಯಮ ಕೇಂದ್ರ
ಈ ಬಾರಿ ಉತ್ತಮವಾದ ಮಾಧ್ಯಮ ಕೇಂದ್ರ ತೆರೆಯಲಾಗಿತ್ತು. ಸ್ಥಳೀಯ ಹಾಗೂ ರಾಜ್ಯ ಮಟ್ಟದ ಸುದ್ದಿಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿತ್ತು.


ದೇವೇಗೌಡರನ್ನು ಗೆಲ್ಲಿಸುವುದು ಜಿಲ್ಲೆಯ ಜನತೆ ಆದ್ಯ ಕರ್ತವ್ಯ ಎಂದು ಭಾವಿಸಿ ಮತದಾನ ಮಾಡಿರುವ ಕಾರಣ ಒಂದು ಲಕ್ಷಕ್ಕೂ ಅಧಿಕ ಬಹುಮತಗಳಲ್ಲಿ ವಿಜಯ ಸಾಧಿಸಲು ಸಾಧ್ಯವಾಗಿದೆ. ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ, ಸಿದ್ದರಾಮಯ್ಯ ಅವಿರತ ಶ್ರಮ, ನರೇಂದ್ರ ಮೋದಿ ಅಲೆಯೂ ಹಾಸನ ಜಿಲ್ಲೆಯಲ್ಲಿ ಕೊಚ್ಚಿ ಹೋಗಿದೆ.
 ಕೆ.ಎಂ.ಶಿವಲಿಂಗೇಗೌಡ, ಅರಸೀಕೆರೆ ಶಾಸಕ


ಬಿಜೆಪಿ ಕಡೆ ಗಳಿಗೆಯಲ್ಲಿ ವಿಜಯಶಂಕರ್ ಅವರನ್ನು ಕಣಕ್ಕೆ ಇಳಿಸಿದ್ದು, ಅವರ ವರ್ಚಸ್ಸಿನ ಬಗ್ಗೆ ಜನರಿಗೆ ಮನವರಿಕೆ ಮಾಡಲು ಕಾರ್ಯಕರ್ತರಿಗೆ ಸಮಯ ಕಡಿಮೆ ಇದ್ದ, ಕಾರಣ ಇದು ಬಿಜೆಪಿಗೆ ನಿರೀಕ್ಷಿತ ಫಲಿತಾಂಶವೇ ಆಗಿದೆ. ರಾಷ್ಟ್ರದಲ್ಲಿ ಮೋದಿ ಅಲೆ, ರಾಜ್ಯದಲ್ಲಿ ಸಂಘಟಿತ ಹೋರಾಟ ನಡೆಸಿದ ಫಲವಾಗಿ ಉತ್ತಮ ಫಲಿತಾಂಶ ಬಂದಿದೆ.                 ಎ.ಎಸ್.ಬಸವರಾಜು, ಮಾಜಿ ಶಾಸಕ


ಮಾಧ್ಯಮಗಳು ಎಂದಿಗೂ ಸತ್ಯದ ಮೇಲೆ ಬೆಳಕು ಚೆಲ್ಲುತ್ತವೆ ಎಂಬುದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ. ರಾಷ್ಟ್ರದಲ್ಲಿ ನರೇಂದ್ರ ಮೋದಿ ಅಲೆ ಒಪ್ಪಲು ಸಾಧ್ಯವಿಲ್ಲದ ರಾಜಕೀಯ ಮುತ್ಸದ್ಧಿಗಳು, ಅದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಲೇವಡಿ ಮಾಡಿದ್ದರು, ಆದರೆ ಇದು ಪ್ರಕಟಿತವಾದ ಫಲಿತಾಂಶವು ಜನತೆಯ ನಿರೀಕ್ಷೆಯನ್ನು ಮೀರಿದೆ.   
 ಎನ್.ಡಿ. ಪ್ರಸಾದ್, ಜಿಲ್ಲಾ ಬಿಜೆಪಿ ವಕ್ತಾರ



ಜಿಲ್ಲೆಯಲ್ಲಿ ಮಾಜಿ ಪ್ರಧಾನಿಗಳ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವಿರತ ಹೋರಾಟ ನಡೆಸಿದ್ದು, ನಿರೀಕ್ಷಿತ ಮಟ್ಟದಲ್ಲಿಯೇ ಫಲಿತಾಂಶ ಪ್ರಕಟವಾಗಿದೆ. ಇದರಿಂದ ಯಾರು ಧೃತಿಗೆಡುವಂತಿಲ್ಲ, ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ಗೆ 13-15 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಗುರಿ ತಲುಪಲು ಸಾಧ್ಯವಾಗಲ್ಲಿಲ್ಲ.         ಪಟೇಲ್ ಶಿವಪ್ಪ, ಕಾಂಗ್ರೆಸ್ ಮುಖಂಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement