ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜನರ ತೀರ್ಮಾನಕ್ಕೆ ಬದ್ಧ: ಮಂಜು ವಿಶ್ವಾಸದ ನುಡಿ

Rashmi Kasaragodu
Updated On : 16 May 2014, 11:35 am

ಕ.ಪ್ರ.ವಾರ್ತೆ    ಹಾಸನ    ಮೇ 16
ಮತದಾರರು ತನ್ನನ್ನು ತಿರಸ್ಕರಿಸುವ ತೀರ್ಮಾನಕ್ಕೆ ತಾವು ಬದ್ಧರಾಗಿರುವುದಾಗಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಹೇಳಿದ್ದಾರೆ.
ಶುಕ್ರವಾರ ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯು ಭಾರೀ ಕುತೂಹಲವನ್ನು ಮೂಡಿಸಿತ್ತು. ಗೆಲವಿಗಾಗಿ ಪಕ್ಷ ಸಂಘಟಿಸಿ ಹೋರಾಟ ಮಾಡಲಾಯಿತು. ಮತದಾರರು ಈ ಭಾರಿ ತಿರಸ್ಕರಿಸಿರುವುದು ಮುಂದಿನ ಚುನಾವಣೆಗೆ ಗೆಲುವಿನ ಮೆಟ್ಟಿಲಾಗಲಿದೆ ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲೆಯ ಮತದಾರರಿಗೆ ಅಭಾರಿಯಾಗಿದ್ದು, ಮೊದಲನೇ ಬಾರಿ ಮಾಜಿ ಪ್ರಧಾನಿಯ ವಿರುದ್ಧ ಇಷ್ಟುಮಟ್ಟಿಗೆ ಮತವನ್ನು ನನಗೆ ನೀಡಿರುವುದು ಸಂತಸ ತಂದಿದೆ ಎಂದು ಎ.ಮಂಜು ಅಭಿಪ್ರಾಯಪಟ್ಟರು.
ಅರಕಲಗೂಡ ಕ್ಷೇತ್ರದಲ್ಲಿ ಕಡಿಮೆ ಮತ ಬರಲು ಕಾರಣವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎ.ಮಂಜು, ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತದಾನ ಆಗುವ ರೀತಿ ಬೇರೆ ಎಂದು ಸಮರ್ಥಿಸಿಕೊಂಡರು.
ತಪ್ಪಿಗೆ ಶಿಕ್ಷೆ: ದೇಶದ ಫಲಿತಾಂಶವನ್ನು ಗಮನಿಸಿದಾಗ ನಮ್ಮ ತಪ್ಪಿಗೆ ಶಿಕ್ಷೆ ಆಗಿದೆ. ದೇಶದಲ್ಲಿ ಸೋಲನ್ನು ಒಪ್ಪಿಕೊಂಡಂತಾಗಿದೆ. ಇನ್ನು ಮುಂದೆ ಪಕ್ಷ ಸಂಘಟನೆ ಮಾಡಿ ಹೋರಾಟವನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು. ಮುಖಂಡ ಎಸ್.ಎಂ.ಆನಂದ್ ಹಾಗೂ ಇತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement