ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಟಾಕಿ ಸಿಡಿಸಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮ

Rashmi Kasaragodu
Updated On : 16 May 2014, 11:37 am

ಕಡೂರು: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜೆಡಿಎಸ್‌ದಿಂದ ಶುಕ್ರವಾರ ವಿಜಯೋತ್ಸವ ಆಚರಿಸಲಾಯಿತು.
 ಜೆಡಿಎಸ್ ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮಾಜಿ ಪುರಸಭಾಧ್ಯಕ್ಷ ಮುಖಂಡ ಕೆ.ಎಚ್ ಲಕ್ಕಣ್ಣ, ಅಲ್ಪಸಂಖ್ಯಾತರ ವಿಭಾಗದ ತಾಲೂಕು ಅಧ್ಯಕ್ಷ ಎನ್. ಇಮಾಮ್ ನೇತೃತ್ವದಲ್ಲಿ ಪಟ್ಟಣದ ಕೆಎಲ್‌ವಿ ವೃತ್ತ ಹಾಗೂ ಪಟ್ಟಣದ ದೇವರಾಜು ಅರಸು ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲೂ ಪಟಾಕಿ ಸಿಡಿಸಿ ಸಂಭ್ರಮೋತ್ಸವ ಆಚರಿಸಲಾಯಿತು.
ಈ ಸಂದರ್ಭಧಲ್ಲಿ ಮಾತನಾಡಿದ ಭಂಡಾರಿ ಶ್ರೀನಿವಾಸ್ ಮತ್ತಿತರ ಮುಖಂಡರು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕೈಗೊಂಡಿರುವ ನೂರಾರು ಕೋಟಿ ರು.ಗಳ ಅಭಿವೃದ್ಧಿ ಕಾರ್ಯಗಳು ಅವರಿಗೆ ಬೆಂಗಾವಲಾಗಿವೆ. ಆದ್ದರಿಂದ ಗೌಡರನ್ನು ಮತದಾರ ಪ್ರಭುಗಳು ಆಯ್ಕೆ ಮಾಡಿ ರೈತರ ಪರ ಹೋರಾಟಕ್ಕಾಗಿ ಮತ್ತೆ ಸಂಸತ್ತಿಗೆ ಕಳುಹಿಸಿದ್ದಾರೆ. ದೇವೇಗೌಡರು ಯಗಚಿ ಜಲಾಶಯ ಯೋಜನೆಯಿಂದ 53 ಸಾವಿರ ಹೆಕ್ಟೇರ್‌ಗೆ ನೀರುಣಿಸುವ ಯೋಜನೆ ಜಾರಿಗೊಳಿಸಿದ್ದಾರೆ ಎಂದರು. ಮುಖಂಡರಾದ ತಿಪ್ಪೇಶ್, ಮಂಜುನಾಥ್, ಕದಂಬ ವೆಂಕಟೇಶ್, ರಮೇಶ್, ಕಾಂತರಾಜು, ಪಂಗುಲಿ ತಿಮ್ಮಯ್ಯ, ಶಂಕರ್, ಲೋಕೇಶ್, ಆಟೋ ರಮೇಶ್ ಮತ್ತಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement