ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕತ್ತಿಮಲ್ಲೇನಹಳ್ಳಿ ಗ್ರಾಪಂನಲ್ಲಿ ಖಾತ್ರಿ ಅವ್ಯವಹಾರ: ಆರೋಪ

Rashmi Kasaragodu
Updated On : 17 May 2014, 11:36 am

ಹಾಸನ: ಅರಕಲಗೂಡು ತಾಲೂಕಿನ ಕತ್ತಿಮಲ್ಲೇನಹಳ್ಳಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ  2013-14ನೇ ಸಾಲಿನಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಮತ್ತು ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ತೇಜೂರು ಗ್ರಾಮದ ಯೋಗೀಶ್ ಮತ್ತು ಬಸಪ್ಪ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕತ್ತಿಮಲ್ಲೇನಹಳ್ಳಿ ಗ್ರಾಪಂನಲ್ಲಿ 2013-14ನೇ ಸಾಲಿಗೆ 100 ಶೌಚಾಲಯಗಳು ಮಂಜೂರಾಗಿವೆ. ಇದರಲ್ಲಿ ಶೌಚಾಲಯ ನಿರ್ಮಿಸದೆ ಬಿಲ್ ಪಾವತಿಸಲಾಗಿದೆ. ಈ ಪೈಕಿ ಒಂದೇ  ಶೌಚಾಲಯಕ್ಕೆ ಎರಡು ಹೆಸರಿನಲ್ಲಿ ಬಿಲ್ ಪಾವತಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ತೇಜೂರು ಗ್ರಾಮದ ಕಣಿವೆ ಕಾವಲು ಒಳಗೆ ತೇಜೂರು ಉಪ್ಪಾರ ಕಟ್ಟೆ ಅಭಿವೃದ್ಧಿ ಕಾಮಗಾರಿ ಮಾಡಿರುವುದಾಗಿ ತಿಳಿಸಲಾಗಿದೆ. ಆದರೆ, ಅರಣ್ಯ ಇಲಾಖೆಯವರ ಕಾಮಗಾರಿಯನ್ನೇ ತೋರಿಸಿ ಹಣ ಡ್ರಾ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement