ಕೃಷಿಕರ ಮಕ್ಕಳಿಗೆ ಉಚಿತ ತರಬೇತಿ
ಹಾಸನ: ಕೃಷ್ಣರಾಜಸಾಗರದ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2014-15 ನೇ ಸಾಲಿನಲ್ಲಿ ರೈತ ಮಕ್ಕಳಿಗೆ 10 ತಿಂಗಳ ಉಚಿತ ತರಬೇತಿ ನೀಡಲಿದ್ದಾರೆ.ತರಬೇತಿಗೆ ಜಿಲ್ಲೆಯಿಂದ 7 ಜನ ಅರ್ಹ ಅಭ್ಯರ್ಥಿಗಳನ್ನು (ಸಾಮಾನ್ಯ-6 ಹಾಗೂ ಪರಿಶಿಷ್ಟ ಜಾತಿ-1) ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹಾಗೂ ಸ್ವಂತ ಹೆಸರಿನಲ್ಲಿ ಅಥವಾ ಪೋಷಕರ ಹೆಸರಿನಲ್ಲಿ ಜಮೀನು ಹೊಂದಿದ್ದು, ಸ್ವಂತ ಸಾಗುವಳಿ ಮಾಡುತ್ತಿರಬೇಕು. ಅರ್ಹ ರೈತ ಮಕ್ಕಳು ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಲ್ಲಿ ಮೇ 24 ರೊಳಗೆ ಸಲ್ಲಿಸುವಂತೆ ಕೋರಲಾಗಿದೆ. ಮಾಹಿತಿಗೆ, ದೂ.ಸಂ.08172-234995 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ. ಶೇ.96 ಫಲಿತಾಂಶ: ಹಾಸನ ತಾಲೂಕಿನ ಅರೇಕಲ್ ಹೊಸಳ್ಳಿ ಸತ್ಯನಾರಾಯಣ ಪ್ರಸನ್ನ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96.4 ರಷ್ಟು ಫಲಿತಾಂಶ ಲಭಿಸಿದೆ.