ಚನ್ನಕೇಶವ ದೇವಾಲಯ ಜೀರ್ಣೋದ್ಧಾರ ಭರವಸೆ
ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಸಮೀಪದ ಬೆಳಗುಳಿಯ ಇತಿಹಾಸ ಪ್ರಸಿದ್ಧ ಚನ್ನಕೇಶವ ದೇವಸ್ಥಾನ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆ ತಲುಪಿರುವ ದೇವಾಲಯಕ್ಕೆ ಶಾಸಕ ಸಿ.ಎನ್ ಬಾಲಕೃಷ್ಣ ಭೇಟಿ ನೀಡಿ ಜೀರ್ಣೋದ್ಧಾರ ಮಾಡಿಸುವ ಭರವಸೆ ನೀಡಿದರು. ನಿವೃತ್ತ ಪ್ರಾಂಶುಪಾಲ ಮೇಲಗಿರಿಗೌಡ, ಜಯಲಿಂಗೇಗೌಡ, ಗ್ರಾಪಂ ಉಪಾಧ್ಯಕ್ಷ ರಾಜಶೇಖರ್, ಮುಖಂಡರಾದ ಸಂತೋಷ್, ಸುರೇಶ್ ಬಿ.ಪಿ,ಲಕ್ಷ್ಮೇಗೌಡ, ಪುಟ್ಟೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
16 ಅತ್ಯುನ್ನತ ಶ್ರೇಣಿ : ಜಾವಗಲ್‌ನ ಮಾಡಲ್ ಆಂಗ್ಲ ಪ್ರೌಢ ಶಾಲೆಯಲ್ಲಿ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 16 ಅತ್ಯುನ್ನತ ಶ್ರೇಣಿಯಲ್ಲಿ 17 ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ವಿದ್ಯಾರ್ಥಿಗಳಾದ ಕೆಸಿ ಜೀವನ್ 592, ಅಮಿತ್ 578, ವಿದ್ಯಾ 575 ಕುಮುದ 563, ಅಂಕಗಳಿಸಿದ್ದಾರೆ ಎಂದು ಸಂಸ್ಥೆ ಕಾರ್ಯದರ್ಶಿ ಡಾ.ವಿನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.