'ಜಾತೀಯತೆ ಮುಳ್ಳಿನ ಮೇಲೆ ನವಿರಾದ ಬಳ್ಳಿ ಇದ್ದ ಹಾಗೆ'
ಹಾಸನ: ಜಾತೀಯತೆಯನ್ನು ಅರಿಯದ ಜನರು ಗುಡಿಯನ್ನು ನಿರಾಕರಿಸಿದ ಬಸವಣ್ಣ ಅವರಿಗೆ ಗುಡಿ ಕಟ್ಟುತ್ತಿದ್ದಾರೆ. ಜಾತಿಯನ್ನು ನಿರಾಕರಿಸಿದ ಕನಕದಾಸರನ್ನು ಕುರುಬ ಜನಾಂಗಕ್ಕೆ ಸೇರಿಸಿದ್ದಾರೆ. ಜಾತೀಯತೆ ಎಂಬುದು ಮುಳ್ಳು ಗಿಡದ ಮೇಲೆ ನವಿರಾದ ಬಳ್ಳಿ ಇದ್ದ ಹಾಗೆ ಎಂದು ಎ.ವಿ.ಕೆ. ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಎಚ್.ಎಲ್.ಮಲ್ಲೇಶ್ಗೌಡ ತಿಳಿಸಿದರು. ಇತ್ತೀಚೆಗೆ ಹಾಸನಾಂಬ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನಕದಾಸರ ಅಧ್ಯಯನ ಮತ್ತು ಬೆಂಗಳೂರಿನ ಸಂಶೋಧನಾ ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ನಡೆದ 'ಮುತ್ತು ಬಂದಿದೆ ಕೇರಿಗೆ' ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರ ಕೀರ್ತನೆಗಳು ಮುತ್ತಿನ ಮೊತ್ತ ಮುತ್ತು ಎಂಬ ಸಾಹಿತ್ಯ ಕೇರಿಗೆ ಬಂದಿದೆ, ಎಷ್ಟು ಬೇಕಾದರೂ ದೋಚಿಕೊಳ್ಳಿ, ಸಂಗ್ರಹಿಸಿಕೊಳ್ಳಿ, ಮುತ್ತು ಜೊಳ್ಳಲ್ಲ ಸತ್ವಯುತವಾದದ್ದು, ಅಂಥ ಮುತ್ತು ಕೇರಿಗೆ ಬಂದಿದೆ ಎಂದು ಹೇಳಿದರು. ಇಂದು ಕನಕ ದಾಸರ ಜೀವನದ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ವಿಷಾದಿಸಿದರು. ಪ್ರಾಂಶುಪಾಲೆ ಗೀತಾ ಎಸ್, ಸಂಸ್ಥೆಯ ಕಾರ್ಯದರ್ಸಿ ಯತೀಶ್ ಸೇರಿದಂತೆ ಅನೇಕರಿದ್ದರು.