ದೇವೇಗೌಡರ ಗೆಲವು ಜೆಡಿಎಸ್ ಸಂಭ್ರಮ
ಅರಕಲಗೂಡು: ಮಾಜಿ ಪ್ರಧಾನಿ, ಹಾಸನ ಲೋಕಸಭಾ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ದೇವೇಗೌಡರ ಗೆಲವು ಅರಕಲುಗೂಡು ಪಟ್ಟಣ ಜೆಡಿಎಸ್ ಕಾರ್ಯಕರ್ತರಲ್ಲಿ ಸಂತಸದಿಂದ ಬೀಗುವಂತೆ ಮಾಡಿತ್ತು. ಕಾರ್ಯಕರ್ತರು ಇಲ್ಲಿನ ಅ.ನ.ಕೃ ವೃತ್ತದಲ್ಲಿ ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಕಾರ್ಯಕರ್ತರುಎಲ್ಲರಿಗೂ ಸಿಹಿ ಹಂಚುವುದರ ಮೂಲಕ ಸಂತಸ ಹಂಚಿಕೊಂಡರು.
ಶಂಕರ ಸಪ್ತಾಹ: ಅರಕಲಗೂಡು ಪಟ್ಟಣದಲ್ಲಿ ಶಂಕರ ಸಪ್ತಾಹ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದುವು. ಇಲ್ಲಿನ ಶಂಕರ ಆಲಯದಲ್ಲಿ ಪ್ರತಿದಿನ ಅಭಿಷೇಕ, ವಿಶೇಷಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆದವು. ಇದೇ ವೇಳೆ ಶಂಕರರ ಉತ್ಸವವು ಪಟ್ಟಣದ ರಥಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿತು. ಶಂಕರ ಸಪ್ತಾಹ ಸಮಿತಿ ಸಂಚಾಲಕ ಎ.ವಿ.ಮಂಜುನಾಥ ಶರ್ಮ, ಬ್ರಾಹ್ಮಣ ಮಹಾಸಭಾ, ವಿಪ್ರ ಮಹಿಳಾ ಬಳಗದ ಸಹಕಾರದಿಂದ ಸಪ್ತಾಹ ನೆರವೇರಿತು.