ಬಿಜೆಪಿ ಗೆಲವು: ಅರಕಲಗೂಡು ಕಾರ್ಯಕರ್ತರ ವಿಜಯೋತ್ಸವ
ಅರಕಲಗೂಡು: ದೇಶಾದ್ಯಂತ ಬಿಜೆಪಿ ಅಭೂತಪೂರ್ವ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
ಬಿಜೆಪಿ ಬಹುಮತ ಪಡೆದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಪಟ್ಟಣದ ಅರಕಲುಗೂಡು ಪಟ್ಟಣದ ಬಿಜೆಪಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ ವಿಜಯೋತ್ಸವ ಮೆರೆದರು.ನಂತರ ಪಟ್ಟಣದ ದೊಡ್ಡಮ್ಮ ವೃತ್ತ ಮತ್ತು ಅ.ನ.ಕೃ ವೃತ್ತಗಳಲ್ಲಿ ಪಟಾಕಿ ಸಿಡಿಸಿದ ಕಾರ್ಯಕರ್ತರು ಬಿಜೆಪಿ ಮತ್ತು ಮೋದಿ ಪರ ಘೋಷಣೆಗಳನ್ನು ಕೂಗಿದರು.ಈ ವೇಳೆ ಬಿ.ಜೆ.ಪಿ ಮುಖಂಡ ಎಂ.ಜಿ.ಸೋಮಶೇಖರ್, ಅರಕಲುಗೂಡು ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಕೇಶವೇಗೌಡ,ಎ.ನ್.ರವಿಕುಮಾರ್, ಲೋಕೇಶ್, ಸಂಜಯ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.