ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಂಪರು ಪರೀಕ್ಷೆ ನಡೆಸಲು ಬಿ.ಕೆ.ಮಂಜುನಾಥ್ ಆಗ್ರಹ

Rashmi Kasaragodu
Updated On : 17 May 2014, 11:40 am

ಹಾಸನ: ನನ್ನ ಅಪಹರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು ಹಾಗೂ ಮಂಪರು ಪರೀಕ್ಷೆಗೆ ತನ್ನನ್ನು ಹಾಗೂ ಅಪಹರಣ ಮಾಡಿದವರನ್ನು ಒಳಪಡಿಸಬೇಕು ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಿಸ್ ಬ್ಯಾಂಕ್ ಖಾತೆ ಹೊಂದಿರುವವರ ಕುರಿತು ಮಾಹಿತಿ ನೀಡಬೇಕು ಹಾಗೂ ಅಲ್ಲಿರುವ ಹಣವನ್ನು ಭಾರತಕ್ಕೆ ತರಲು ಇರುವ ಕಾನೂನು ತೊಡಕನ್ನು ಸರಿಪಡಿಸಿಕೊಂಡು ಶೀಘ್ರವೇ ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
 ನಂತರ 2 ತಿಂಗಳ ಕಳೆದರೂ ಈ ಕುರಿತು ಯಾವುದೇ ಕ್ರಮ ಜುರಗಿಸದ ಕಾರಣ ಆರ್‌ಟಿಐನಲ್ಲಿ ಅರ್ಜಿ ಹಾಕಲಾಯಿತು. ಈ ಬಗ್ಗೆ 2013ರಲ್ಲಿ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದವು. ಅದನ್ನು ಸೋನಿಯಾಗಾಂಧಿ ಹಾಗೂ ರಾಜ್ಯಪಾಲರಿಗೂ ಸಹ ಬರೆಯಲಾಯಿತು. ಅದಕ್ಕೆ ಹಿಂಬರವು ಕೂಡಲೇ ಬಂದಿದ್ದವು ಎಂದರು. ಈ ಹಿನ್ನೆಲೆಯಲ್ಲಿ ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿದ್ದ ಪರಿಣಾಮ, ಒಂದು ವರ್ಷದ ನಂತರ ನಗರಸಭೆ ಸದಸ್ಯರಾಗಿದ್ದ ಇಂಪಾ ಹಾಗೂ ಪತಿ ಸುರೇಂದ್ರ ಎಂಬುವರು ಪ್ರಸನ್ನಕುಮಾರ್ ಎಂಬವರನ್ನು ಕರೆದುಕೊಂಡು ಬಂದು ಪರಿಚಯಿಸಿದರು.
 ನಮ್ಮ ಹತ್ತಿರ ಸಾವಿರಾರು ಕೋಟಿ ಹಣ ಇದೆ. ಅದನ್ನು ಮಠ ಮಾನ್ಯಗಳಿಗೆ, ಸಂಘ-ಸಂಸ್ಥೆಗಳಿಗೆ ತೆಗೆದುಕೊಂಡ ಜನ ಉಪಯೋಗಿ ಕೆಲಸಕ್ಕೆ ಬಳಸುವಂತೆ ಪ್ರಚೋದಿಸಿದರು.
 ಅದಕ್ಕೆ ನಾನು ಆಗುವುದಿಲ್ಲ ಎಂದಿದ್ದೆ.ಆದರೆ ಏ.10, 2014ರಂದು ನಮ್ಮ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಆತ್ಮೀಯರಂತೆ ನನ್ನೊಂದಿಗೆ ವರ್ತಿಸಿದರು. ಆಗ ನಾನು ಕಾರು ಹತ್ತಿ ಕುಳಿತೊಂಡೇ ಅಷ್ಟೆ. ಅಲ್ಲಿ ನನ್ನ ಪ್ರಜ್ಞೆ ಮಂಕಾಗಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement