ಮೂಢನಂಬಿಕೆ ಜಾಗೃತಿ ಪ್ರಾತ್ಯಕ್ಷಿಕೆ
ಹೊಳೆನರಸೀಪುರ: ಪಟ್ಟಣದ ಮೈಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬೇಸಿಗೆ ಶಿಬಿರದ ವಿದ್ಯಾರ್ಥಿಗಳಿಗೆ ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ತರಬೇತುದಾರ ತಮ್ಮಯ್ಯ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಶಿಕ್ಷಕ ಭವಾನಿಶಂಕರ್ ಮೂಢನಂಬಿಕೆಗಳ ಬಗ್ಗೆ ಮಾತನಾಡಿ, ಕಂಪ್ಯೂಟರ್ ಯುಗದಲ್ಲಿಯೂ ಸಹ ಮೂಢನಂಬಿಕೆಗಳು ಮನುಷ್ಯನೊಂದಿಗೆ ಬೆಳೆದುಕೊಂಡು ಬಂದಿದ್ದು ಒಂದು ಕಾಲದ ಕೆಲವೊಂದು ನಂಬಿಕೆಗಳು ಇನ್ನೊಂದು ಕಾಲದಲ್ಲಿ ಸುಳ್ಳೆಂದು ವೈಜ್ಞಾನಿಕವಾಗಿ ಸಾಬೀತಾಗುತ್ತದೆ. ಹೀಗಾಗಿ ಆ ನೆರಳಿಗೆ ಅಥವಾ ಅವನ ಪ್ರತಿಫಲನಕ್ಕೆ ತೊಂದರೆ ಉಂಟು ಮಾಡಿದರೆ ವ್ಯಕ್ತಿಯ ಆತ್ಮಕ್ಕೆ ತೊಂದರೆ ಮಾಡಿದಂತೆ ಎಂದು ನಂಬಲಾಗಿತ್ತು ಎಂದರು. ಬೆಕ್ಕು ಅಡ್ಡ ಹೋಗುವುದು, ಹಲ್ಲಿ ನುಡಿಯುವುದು, ಕನ್ನಡಿ ಒಡೆಯುವುದು, ಮೈಮೇಲೆ ದೇವರು ಬರುವುದು, ಮೈಮೇಲೆ ದೆವ್ವ ಬರುವುದು, ನಾಲಗೆ ಮೇಲೆ ಕರ್ಪೂರ ಹಚ್ಚಿಕೊಳ್ಳುವುದು, ಗಾಳಿಯಲ್ಲಿ ಬೆಂಕಿ ಹೊತ್ತಿಸುವುದು, ಮೈಮೇಲೆ ಬೆಂಕಿ ಆಡಿಸುವುದು, ಬೀಳುತ್ತಿರುವ ನಕ್ಷತ್ರ ನೋಡಿದರೆ ಅಪಶಕುನ ಎನ್ನುವುದು ಹೀಗೆ ಹಲವಾರು ಉದಾಹರಣೆಗಳನ್ನು
ಪ್ರಾತ್ಯಕ್ಷಿಕೆ ಮೂಲಕ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.