ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನ
ಹಾಸನ: ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಯೋಜನೆಯಲ್ಲಿ ಈ ಜಿಲ್ಲೆಗೆ ಸಂಬಂಧಿಸಿದಂತೆ ಆಲೂಗಡ್ಡೆ (ಮಳೆಯಾಶ್ರಿತ) (ನೀರಾವರಿ), ಹತ್ತಿ (ಮಳೆಯಾಶ್ರಿತ) ಹಾಗೂ ಬಾಳೆ ಬೆಳೆಗಳಿಗೆ ಬೆಳೆ ವಿಮೆಗೊಳಪಡಿಸಲು ಅಧಿಸೂಚನೆ ಹೊರಡಿಸಲಾಗಿದೆ. ಒಳಪಡುವ ಬೆಳೆಗಳು, ತಾಲೂಕು ಹಾಗೂ ಹೋಬಳಿಗಳ ವಿವರ, ಬೆಳೆಗಳು ತಾಲೂಕು ಹಾಗೂ ಹೋಬಳಿ ವಿವರ.
ಆಲೂಗಡ್ಡೆ (ಮಳೆಯಾಶ್ರಿತ): ಆಲೂರು, ಅರಕಲಗೂಡು, ಬೇಲೂರು, ಹಾಸನ, ಹೊಳೆನರಸೀಪುರ ತಾಲೂಕಿನ ಎಲ್ಲಾ ಹೋಬಳಿಗಳು, ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ,ಬೇಲೂರು ತಾಲೂಕಿನ ಅರೇಹಳ್ಳಿ, ಕಸಬಾ, ಬಿಕ್ಕೋಡು, ಹಳೇಬೀಡು, ಮಾದೀಹಳ್ಳಿ ಹೋಬಳಿಗಳು. ಅರಸೀಕೆರೆ ತಾಲೂಕಿನ ಕಸಬಾ, ಗಂಡಸಿ, ಜಾವಗಲ್, ಕಣಕಟ್ಟೆ ಹೋಬಳಿ ಒಳಪಡುತ್ತವೆ ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು.