ಆತ್ಮ ಯೋಜನೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹಾಸನ: ಆತ್ಮ ಯೋಜನೆಯಲ್ಲಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳಿಗೆ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಷರತ್ತಿಗೆ ಒಳಪಟ್ಟು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ತಾವು ಯಾವ ಜಿಲ್ಲೆಗಳಲ್ಲಿ, ಯಾವ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಲು ಆಸಕ್ತಿಯಿದೆಯೋ ಅಂತಹ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಮೇ 31ರೊಳಗಾಗಿ ಸೀಲು ಮಾಡಿದ ಲಕೋಟೆಯಲ್ಲಿ ಮುದ್ದಾಂ ನೋಂದಣಿ ಅಂಚೆ ಮೂಲಕ ಸಲ್ಲಿಸುವುದು. ಯುವಕ ಅಭ್ಯರ್ಥಿಗಳಿಗೆ ಪಾಶಸ್ತ್ಯ ನೀಡಲಾಗುವುದು ಆದಾಗ್ಯೂ ಸೂಕ್ತ ಅಭ್ಯರ್ಥಿಗಳು ಒಂದು ವೇಳೆ ದೊರೆಯದಿದ್ದಲ್ಲಿ ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಪಡೆದವರನ್ನು ಪರಿಗಣಿಸಲಾಗುವುದು. ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಕನಿಷ್ಠ ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ. ಸ್ನಾತಕೋತ್ತರ ಪದವಿಗೆ ಹಾಗೂ ಕಂಪ್ಯೂಟರ್ ಜ್ಞಾನವುಳ್ಳ ಅಭ್ಯರ್ಥಿಗಳಿಗೆ ಆದ್ಯೆತೆ ನೀಡಲಾಗುವುದು. ಕನಿಷ್ಠ 2 ವರ್ಷಗಳ ವಿಸ್ತರಣಾ ಕ್ಷೇತ್ರಗಳಲ್ಲಿ ಅನುಭವ ಇರಬೇಕು. ತಾಲೂಕು ಸಹಾಯಕ ಕೃಷಿನಿರ್ದೇಶಕರ ಕಚೇರಿ ತಾಲೂಕು, ಕಸಬಾ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಒಟ್ಟು 8 ಹುದ್ದೆಗಳು ಖಾಲಿ ಇವೆ. ಮಾಸಿಕ 25 ಸಾವಿರ ರು. ವೇತನ ನೀಡಲಾಗುವುದು. ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕನಿಷ್ಠ ಕೃಷಿಸಂಬಂಧಿತ ವಿಶ್ವವಿದ್ಯಾನಿಲಯಗಳು ನೀಡುವ 2 ವರ್ಷಗಳ ಕೋರ್ಸ್ ಹೊಂದಿರಬೇಕು. ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ವಿಸ್ತರಣಾ ಕ್ಷೇತ್ರಗಳಲ್ಲಿ ಅನುಭವ ಹೊಂದಿರಬೇಕು. ಹೋಬಳಿ, ಗ್ರಾಮೀಣ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ 29 ಹುದ್ದೆಗಳು ಖಾಲಿ ಇದ್ದು, ಮಾಸಿಕವಾಗಿ 15 ಸಾವಿರ ರು. ವೇತನ ನೀಡಲಾಗುವುದು. ಕಂಪ್ಯೂಟರ್ ಪ್ರೊಗ್ರಾಮರ್ ಹುದ್ದೆಗೆ ಕಂಪ್ಯೂಟರ್ ಜ್ಞಾನವುಳ್ಳ ಯಾವುದೇ ಪದವೀಧರ, ಬಿ.ಇ, ಬಿ.ಟೆಕ್, ಎಂಸಿಎ ಪದವೀದರರಿಗೆ ಆದ್ಯತೆ ನೀಡಲಾಗುವುದು. 1 ವರ್ಷ ಅನುಭವ ಪಡೆದಿರಬೇಕು. ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ 1 ಹುದ್ದೆ ಖಾಲಿ ಇದ್ದು, ಮಾಸಿಕ 16 ಸಾವಿರ ರು. ವೇತನ ನೀಡಲಾಗುವುದು. ಹೆಚ್ಚಿನ ವಿವರಕ್ಕೆ ಇಲಾಖಾ ಗಿಜಛಿಡ್ಝಡಿಜ ಡಿಡಿಠಣಣಣ್ಠಛ್ಝಡಿಛಟ್ಝಡ್ಠಿಛ.್ಞಛ್ಠ.ಟ್ಝ್ಛಿ.್ಝಟಿ ನಲ್ಲಿ ಮಾಹಿತಿ ಪಡೆಯಬಹುದು.