ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗೋ ಶಾಲೆಯಿಂದಲೇ ಜಾನುವಾರು ಕಳವು

Vishwanath S
Updated On : 19 May 2014, 12:43 pm

ಕನ್ನಡಪ್ರಭ ವಾರ್ತೆ,ಅರಸೀಕೆರೆ, ಮೇ 18
 ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಕಸ್ತೂರಿ ಬಾ ಗಾಂಧಿ ಶಿಬಿರದ ಗೋಶಾಲೆಯಲ್ಲಿನ 10 ಹಸುಗಳು ಮತ್ತು 5 ಹೋರಿಗಳನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ನಡೆದಿದೆ.
ಈ ಸಂಬಂಧ ಗೋ ಶಾಲೆಯ ವ್ಯವಸ್ಥಾಪಕರು ನೀಡಿರುವ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಸಂಕ್ರಾತಿ ಹಬ್ಬದ ದಿನದಂದು ಪಟ್ಟಣದ ಹೊರವಲಯದಲ್ಲಿ ಕಸ್ತೂರಿ ಬಾ ಗಾಂಧಿ ನ್ಯಾಷನಲ್ ಮೆಮೋರಿಯಲ್ ಟ್ರಸ್ಟ್‌ಗೆ ಸೇರಿದ್ದ ಪ್ರದೇಶದಲ್ಲಿ ಮಹಾತ್ಮಗಾಂಧಿ ಗೋಶಾಲೆಯನ್ನು ಪ್ರಾರಂಭಿಸಲಾಗಿತ್ತು. ಈ ಗೋಶಾಲೆಗೆ ತಾಲೂಕಿನ ಬಾಣಾವರ ಸಮೀಪದ ಭಗವಾನ್ ಮಹಾವೀರ ಗೋ ಶಾಲೆಯಿಂದ ಲಕ್ಷಾಂತರ ರುಪಾಯಿ  ಮೌಲ್ಯದ 30 ಗೋವುಗಳನ್ನು ಹಾಗೂ ರೈತರು ತಾವು ಸಾಕಲಾರದೆ ಗೋಶಾಲೆಗೆ ತಂದು ಬಿಟ್ಟಿದ್ದ 7 ಗೋವುಗಳು ಸೇರಿದಂತೆ ಒಟ್ಟು 37 ಗೋವುಗಳಿದ್ದು, ಇವುಗಳ ಪಾಲನೆಗೆ ಎಂದು ಗೋಪಾಲಕರೂ ಇದ್ದರು.
ಗುರುವಾರ ರಾತ್ರಿ ಈ ಗೋಪಾಲಕರು ಜಾನುವಾರುಗಳಿಗೆ ಮೇವು ಮತ್ತು ನೀರು ಕೊಟ್ಟು ಮನೆಗೆ ಮಲಗಲು ಬಂದ ವೇಳೆ ದುಷ್ಕರ್ಮಿಗಳು ಮಹಾತ್ಮ ಗಾಂಧಿ ಗೋಶಾಲೆಯ ಬೀಗ ಮುರಿದು ಹಸುಗಳು ಮತ್ತು ಹೋರಿಗಳ ಕೊರಳಲ್ಲಿದ್ದ ಗಂಟೆ ಮತ್ತು ಹಗ್ಗವನ್ನು ಕಿತ್ತು ಹಾಕಿ ಸುಮಾರು 5 -10 ವರ್ಷದೊಳಗಿನ 10 ಹಸುಗಳು ಮತ್ತು 5 ಹೋರಿಗಳನ್ನು ಕಸ್ತೂರಿ ಬಾ ಗಾಂಧಿ ಶಿಬಿರದ ಹಿಂಭಾಗದ ಪ್ರದೇಶದಲ್ಲಿರುವ ರೇಲ್ವೆ ಹಳಿಗಳನ್ನು ದಾಟಿಸಿಕೊಂಡು ಹೋಗಿ ಜಾನುವಾರುಗಳನ್ನು ಬಲವಂತವಾಗಿ ವಾಹನಗಳಿಗೆ ತುಂಬಿ ಸಾಗಿಸಿದ್ದಾರೆ ಎನ್ನಲಾಗಿದೆ.
ಪೂರ್ವ ನಿಯೋಜಿತ ಸಂಚು: ಘಟನೆಗೆ ಸಾಕ್ಷಿಯಾಗಿ ಸ್ಥಳಗಳಲ್ಲಿ ಸಾಕಷ್ಟು ಕುರುಹು ಬಿಟ್ಟುಹೋಗಿದ್ದು, ಇದೊಂದು ಪೂರ್ವ ನಿಯೋಜಿತ ಸಂಚು ಎಂದು ಅನುಮಾನಿಸಲಾಗಿದೆ. ಈ ಕೃತ್ಯದ ಹಿಂದೆ ಸಮಾಜ ಘಾತುಕ ಶಕ್ತಿಗಳ ಕೈವಾಡದ ಶಂಕೆಯು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಕಾರಣ ಪೊಲೀಸರು ಶೀಘ್ರದಲ್ಲಿಯೇ ಪತ್ತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement