ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇವೇಗೌಡ ಜನ್ಮದಿನ: ವಿಶೇಷಪೂಜೆ

Vishwanath S
Updated On : 19 May 2014, 12:43 pm

ಹಾಸನ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ 82ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ  ಜೆಡಿಎಸ್ ಕಾರ್ಯಕರ್ತರು ದೇವಾಲಯಗಳಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನಗರದ ನೀರುವಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಸೇರಿದಂತೆ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ವಿಶೇಷಪೂಜೆ ಸಲ್ಲಿಸಿದರು. ನಂತರ ತೆಂಗಿನ ಕಾಯಿಯ ಈಡುಗಾಯಿ ಹೊಡೆದರು. ಆನಂತರ ಸಿಹಿ ಹಂಚುವುದರ ಮ ೂಲಕ ದೇವೇಗೌಡರಿಗೆ ಹೆಚ್ಚಿನ ಆಯಸ್ಸು ಲಭಿಸಿಲಿ ಎಂದು ಪ್ರಾರ್ಥಿಸಿದರು. ಮಾಜಿ ಪ್ರಧಾನಿ  ದೇವೇಗೌಡರು ಹಾಸನ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದು, ಅವರಿಗೆ ಇನ್ನೂ ಹೆಚ್ಚಿನ ರಾಜಕೀಯ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಇದೇ ವೇಳೆ  ನೆರದಿದ್ದ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗಡೌರ ಸೇವೆ ದೇಶದಲ್ಲಿ ಅಜರಾಮರವಾಗಿದೆ. ದೇಶಕ್ಕೆ ಹಾಗೂ ರೈತರಿಗೆ ಬೆನ್ನೆಲುಬಾಗಿ ನಿಂತಿರುವ ಅವರಿಗೆ ಇನ್ನೂ ಹೆಚ್ಚು ಆಯುಷ್ಯ ಹಾಗೂ ಆರೋಗ್ಯವನ್ನು ನೀಡಿ ಅವರಿಂದ ಇನ್ನೂ ಹೆಚ್ಚಿನ ಒಳ್ಳೆಯ ಹಾಗೂ ಉತ್ತಮ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಡೆಸಲು ದೇವರು ಅವರಿಗೆ ಭಾಗ್ಯ ಕರುಣಿಸಲಿ ಎಂದರು.
ದೇವೇಗೌಡರಿಗೆ 82 ವರ್ಷ ತುಂಬಿದೆ. ದೇಶಕ್ಕೆ ಅವರ ಬದುಕು ಒಂದು ಆದರ್ಶಮಯವಾಗಿದೆ. ಜನರ ಅಸನಕ್ಕೆ ಸೇವೆ ಮಾಡಿರುವಂತಹ ದೇವೇಗೌಡರಿಗೆ ಆಯೂರ್ ಆರೋಗ್ಯ ಭಾಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿ ದರು.
ಜಿಪಂ ಸದಸ್ಯ ಬಿ.ಆರ್.ಸತ್ಯನಾರಾಯಣ, ನಗರಸಭೆ ಸದಸ್ಯ ಅನಿಲ್‌ಕುಮಾರ್, ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ,  ಹೊಂಗೆರೆ ರಘು, ಚನ್ನಂಗಿಹಳ್ಳಿ ಶ್ರೀಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement