ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಅಭಿವೃದ್ಧಿ ವೈಫಲ್ಯ ಸೋಲಿಗೆ ಕಾರಣ'

Mainashree
Updated On : 21 May 2014, 9:09 am

ಅರಕಲಗೂಡು: ತಾಲೂಕಿನ ಅಬಿವೃದ್ಧಿ ವೈಫಲ್ಯ ಮತ್ತು ಕುಟುಂಬ ರಾಜಕಾರಣದಿಂದಾಗಿ ಜಿಲ್ಲೆಯ ಜನತೆ ಕಾಂಗ್ರೆಸ್‌ನ ಅಭ್ಯರ್ಥಿ ಎ.ಮಂಜು ಅವರನ್ನು ತಿರಸ್ಕರಿಸಿದ್ದಾರೆ ಎಂದು ಪೊಟ್ಯಾಟೋ ಕ್ಲಬ್‌ನ ಎಚ್. ಯೋಗಾರವುಶ್ ಹೇಳಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಜೆಡಿಎಸ್‌ನ ಅಭ್ಯರ್ಥಿ ಎಚ್.ಡಿ.ದೇವೇಗೌಡರಿಗೆ ಪೊಟ್ಯಾಟೋ ಕ್ಲಬ್ ಬೆಂಬಲ ನೀಡಿದ್ದರಿಂದ 77ಸಾವಿರಕ್ಕೂ ಅಧಿಕ ಮತ ಬಂದಿವೆ, ಸಂಸತ್‌ನಲ್ಲಿ ರೈತರ ಪರ ಪ್ರಾಮಾಣಿಕ ಹೋರಾಟದ ಕಾಳಜಿ ಇಟ್ಟುಕೊಂಡಿರುವ ದೇವೇಗೌಡರನ್ನು ಮತದಾರ ಪುರಸ್ಕರಿಸಿದ್ದಾನೆ ಎಂದು ಹೇಳಿದ ಅವರು, ಕಳೆದ 30ವರ್ಷಗಳಿಂದ ರಾಜಕಾರಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ದೇವೇಗೌಡರ ವಿರುದ್ಧಸ್ಪರ್ಧಿಸುವುದೇ ಹೆಗ್ಗಳಿಕೆ ಎಂಬ ಬಾಲಿಶ ಹೇಳಿಕೆ ನೀಡುತ್ತಾರೆ, ಇವರು ದೇವೇಗೌಡರ ಮುಂದೆ ಸಮರ್ಥ ಅಭ್ಯರ್ಥಿ ಅಲ್ಲ, ಶಾಸಕರಾಗಿದ್ದು ಜನರಿಗೆ ಸ್ಪಂದಿಸುವ ಕೆಲಸವನ್ನು  ಮಾಡುತ್ತಿಲ್ಲ, ಸ್ವಜನ ಪಕ್ಷಪಾತ ಮಾಡುತ್ತಾ ಪುತ್ರನನ್ನು ಜಿಲ್ಲಾ ಕಾಂಗ್ರೆಸ್ ಯುವ ಘಟಕಕ್ಕೆ  ತರುವ ಮೂಲಕ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಮರಳು ಲೂಟಿ ಆಗುತ್ತಿದೆ, ರಸ್ತೆಗಳ ದುಸ್ಥಿತಿ ಹೇಳತೀರದಾಗಿದೆ, ಹೊಗೆಸೊಪ್ಪು ರೈತರು ಸಂಕಟದಲ್ಲಿದ್ದಾರೆ, ಕಳೆದ ಸಾಲಿನಲ್ಲಿ ತಾಲೂಕಿನ ವಸತಿ ಹಂಚಿಕೆಯನ್ನು ಮಾಡದೇ ಸುಮಾರು 3000 ಮನೆಗಳು ವಾಪಾಸಾಗಿವೆ, ಫಲಾನುಭವಿಗಳು ಅತಂತ್ರರಾಗಿದ್ದಾರೆ, ಆದರೆ, ಶಾಸಕರು ವರ್ಷ ಕಳೆದರೂ ಮಂತ್ರಿಗಿರಿಯ ಕನವರಿಕೆಯಲ್ಲೇ ಜನಸಾಮಾನ್ಯರ ಹಿತವನ್ನು ಕಡೆಗಣಿಸಿದ್ದಾರೆ. ಆದ್ದರಿಂದಲೇ ಮತದಾರ ತಿರಸ್ಕರಿಸಿ ಬುದ್ಧಿ ಕಲಿಸಿದ್ದಾನೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಎಚ್.ಡಿ.ರೇವಣ್ಣ ಚುನಾವಣೆ ನಂತರ ಪಕ್ಷ ಸೇರ್ಪಡೆ ಕುರಿತು ನಿರ್ಧಾರ ಪ್ರಕಟಿಸುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement