ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉದ್ಯಾನ ನಿರ್ಮಾಣ, ಅಭಿವೃದ್ಧಿಗೆ 4 ಲಕ್ಷ ಮೀಸಲು

Mainashree
Updated On : 21 May 2014, 9:09 am

ಚನ್ನರಾಯಪಟ್ಟಣ: ಆಸ್ಪತ್ರೆ ಆವರಣದಲ್ಲಿ ಉದ್ಯಾನ ನಿರ್ಮಾಣ ಹಾಗೂ ಅಭಿವೃದ್ಧಿಗಾಗಿ ಪುರಸಭೆ ವತಿಯಿಂದ 4 ಲಕ್ಷ ತೆಗೆದಿಡಲಾಗಿದ್ದು ಇದಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಲಾಗುವುದು ಎಂಜು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಆಸ್ಪತ್ರೆ ಸಭಾಂಗಣದಲ್ಲಿ ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆ ಆವರಣದಲ್ಲಿ ಸುಲಭ ಶೌಚಾಲಯ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಆಸ್ಪತ್ರೆಗೆ ಭೇಟಿ ನೀಡುವ ಸಾರ್ವಜನಿಕರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದರು. ಆಸ್ಪತ್ರೆ ಆವರಣದಲ್ಲಿ ನಬಾರ್ಡ್ ವತಿಯಿಂದ ಹೆರಿಗೆ ಆಸ್ಪತ್ರೆ ಮತ್ತು ವಸತಿಗೃಹಗಳನ್ನು ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕಾಮಗಾರಿ ಶೀಘ್ರ ಆರಂಭವಾಗಲಿದೆ. ರಾತ್ರಿ ವೇಳೆ ಪೊಲೀಸರು ಆಸ್ಪತ್ರೆ ಬಳಿ ಗಸ್ತು ತಿರುಗುವುದು ಅನಿವಾರ್ಯ ಎಂದು ಹೇಳಿದರು.
ವೈದ್ಯರೂ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಸಕರಲ್ಲಿ  ಹೇಳಿಕೊಂಡರು. ಪ್ರಮುಖ ಹೋಬಳಿ ಕೇಂದ್ರ ಬಾಗೂರು ಆಸ್ಪತ್ರೆಯ ವೈದ್ಯರ ವಸತಿಗೃಹಗಳು ಹಾಳಾಗಿದ್ದು, ಕಾಂಪೌಂಡ್ ಇಲ್ಲದೆ ದನಕರುಗಳು ಆಸ್ಪತ್ರೆ ಆವರಣಕ್ಕೆ ಬರಲು ಅನುಕೂಲವಾಗಿದೆ ಎಂಬ ದೂರು ಕೇಳಿಬಂತು. ಅದೇ ರೀತಿ ಜುಟ್ಟನಹಳ್ಳಿ, ಹಿರೀಸಾವೆ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ, ಆಸ್ಪತ್ರೆಯ ಜಾಗ ನಿಗದಿ ಮಾಡಿ ಬಿಗಿಮಾಡಬೇಕೆಂಬ ಬೇಡಿಕೆ ಕಾಂತರಾಜಪುರ, ಉದಯಪುರ, ಬಾಗೂರು, ಸಾತೇನಹಳ್ಳಿ ಮುಂತಾದ ಆಸ್ಪತ್ರೆ ವೈದ್ಯರುಗಳಿಂದ ಕೇಳಿಬಂತು.
ಹೆದ್ದಾರಿಯಲ್ಲಿರುವ ಮಟ್ಟನವಿಲೆ ಆಸ್ಪತ್ರೆಯೂ ಅವ್ಯವಸ್ಥೆಗಳ ಆಗರವಾಗಿದೆ. ಕಟ್ಟಡ ಶಿಥಿಲವಾಗಿದೆ. ಕೊಡುತ್ತಿರುವ ಔಷಧ ಸಾಕಾಗುತ್ತಿಲ್ಲ. ಹೆದ್ದಾರಿ ಪ್ರಾಧಿಕಾರ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಆಸ್ಪತ್ರೆ ಕಾಂಪೌಂಡ್ ಒಡೆದುಹಾಕಿ ಜಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅದರ ಪರಿಹಾರ ಮಾತ್ರ ಈವರೆಗೆ ನೀಡಿಲ್ಲ.  ಬೇರೆ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದು ವೈದ್ಯ ಅರುಣ್‌ಕುಮಾರ್ ದೂರಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ನುಗ್ಗೇಹಳ್ಳಿಯ ಹೊಸ ಕಟ್ಟಡವೂ ಸೋರುತ್ತಿದ್ದು ನೀರಿನ ಸಮಸ್ಯೆ ತೀವ್ರವಾಗಿದೆ ಎಂಬ ದೂರಿಗೆ ಈ ಎಲ್ಲ ಸಮಸ್ಯೆ ಹಾಗೂ ಸಿಬ್ಬಂದಿ ಸಮಸ್ಯೆ ಕುರಿತಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು. ಕೆಎಚ್‌ಎಸ್‌ಡಿಪಿ ವತಿಯಿಂದ ಹೆಚ್ಚು ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಶಾಸಕರು ತಿಳಿಸಿದರು.
ತಹಸೀಲ್ದಾರ್ ಕೃಷ್ಣ, ಸಿಪಿಐ ಎಚ್.ಎಂ.ಶೈಲೇಂದ್ರ, ಪುರಸಭಾಧ್ಯಕ್ಷ ಸಿ.ಜಿ.ಮಂಜಣ್ಣ, ಸದಸ್ಯ ಸಿ.ಎನ್.ಶಶಿಧರ್, ಸಿ.ಎನ್.ಅಶೋಕ್, ಡಾ.ಎ.ಆರ್.ಧನಶೇಖರ್, ಸಿ.ವೈ.ಸತ್ಯನಾರಾಯಣ, ಅನಿಲ್‌ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement