ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕುಡಿವ ನೀರು, ರಸ್ತೆ ಮೂಲ ಸೌಲಭ್ಯ ಒದಗಿಸಿ

Mainashree
Updated On : 22 May 2014, 9:35 am

ರಾಮನಾಥಪುರ: ಸಂಗೀತ ಗ್ರಾಮ ರುದ್ರಪಟ್ಟಣಕ್ಕೆ ಸಂಗೀತೋತ್ಸವಕ್ಕೆ ಬರುವ ಪ್ರವಾಸಿಗರಿಗೆ ತಂಗಲು ಯಾತ್ರಿನಿವಾಸ, ಉತ್ತಮ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮುಂತಾದ ಮೂಲಭೂತ ಸೌಲಭ್ಯ ಮಾಡಿಸಿಕೊಡಬೇಕಂದು ಗಾನಕಲಾಭೂಷಣ ವಿದ್ವಾನ್ ಆರ್.ಕೆ. ಪದ್ಮನಾಭ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ದೇಶದ ಹಲವು ಗಣ್ಯರು, ಸಂಗೀತಾಸಕ್ತರು, ಸಂಗೀತಾಭಿಮಾನಿಗಳು ಹಾಸನ ಜಿಲ್ಲೆ ಸಂಗೀತ ಗ್ರಾಮ ರುದ್ರಪಟ್ಟಣಕ್ಕೆ ಬರಲು ಸರಿಯಾದ ರಸ್ತೆ ಇಲ್ಲ. ಪ್ರವಾಸಿಗರು ಉಳಿದುಕೊಳ್ಳಲು ವಸತಿ ಯಾತ್ರಿನಿವಾಸ ಸೌಲಭ್ಯವಿಲ್ಲದೇ ಪೇಚಿಗೆ ಸಿಲುಕುವಂತಾಗಿದೆ.
ಕಾವೇರಿ ನದಿ ದಂಡೆಯಲ್ಲಿದ್ದರೂ ಕುಡಿಯಲು ಶುದ್ದ ನೀರಿನ ಸೌಲಭ್ಯವಿಲ್ಲ. ಉತ್ತಮ ಹೋಟೆಲ್ಗಳಿಲ್ಲ. ವಿದ್ಯುತ್ ಸಮಸ್ಯೆ ನಿವಾರಣೆಯಾಗಿಲ್ಲ ಎಂದರು. ವಿಶ್ವವಿಖ್ಯಾತ ತಂಬೂರಿಯಾಕಾರದ ದೇವತಾ ಮಂದಿರದಲ್ಲಿ ಸಪ್ತಸ್ವರ ದೇವತೆಗಳಿಗೂ ವಿಗ್ರಹಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ವರ್ಷ ಧಾರ್ಮಿಕ ಅಭಿಷೇಕದ ಜತೆಗೆ ನಾದಾಭಿಷೇಕದ ಸಾಂಸ್ಕೃಕ ಪೂಜೆ ನಡೆಯುತ್ತಿದೆ. ಇದರಿಂದ ರುದ್ರಪಟ್ಟಣ ರಾಷ್ಟ್ರಮಟ್ಟದಲ್ಲಿ ಹಿರಿಮೆಗೆ ಒಳಪಟ್ಟಿದ್ದು, ಅಪಾರ ಭಕ್ತಸಮೂಹವನ್ನು ಹೊಂದಿ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement