ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತುಕ್ಕು ಹಿಡಿಯುತ್ತಿರುವ ಕಂಟೈನರ್‌ಗಳು

Mainashree
Updated On : 22 May 2014, 9:40 am

ಸಕಲೇಶಪುರ: ಪೌರಕಾರ್ಮಿಕರ ಕೆಲಸವನ್ನು ಸುಲಭ ಮಾಡುವ ನಿಟ್ಟಿನಲ್ಲಿ ಪುರಸಭೆ ಖರೀದಿಸಿದ ಘನತ್ಯಾಜ್ಯ ಸಂಗ್ರಹ ಕಂಟೈನರ್‌ಗಳು ಈಗ ಪುರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ.
ಪುರಸಭೆಯ ಎಲ್ಲ ವಾರ್ಡ್‌ಗಳ ನಿಗದಿತ ಪ್ರದೇಶಗಳಲ್ಲಿ ಬೃಹತ್ ಕಂಟೈನರ್ ಇಡುವ ಮೂಲಕ ಆ ವಾರ್ಡ್‌ಗಳ ಮನೆ ಮನೆಗಳಲ್ಲಿ ಸಂಗ್ರಹಿಸಿದ ಕಸವನ್ನು ಈ ಕಂಟೈನರ್‌ಗಳಿಗೆ ತಂದು ಹಾಕವುದು ಹಾಗೂ ಕಂಟೈನರ್‌ಗಳಲ್ಲಿ ಭರ್ತಿಯಾದ ಕಸವನ್ನು ಡಂಪರ್‌ಪ್ಲಸರ್ ವಾಹನದ ಮೂಲಕ ಸಾಗಿಸುವ ಉದ್ದೇಶದಿಂದ 2011-12ನೇ ಸಾಲಿನಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ರಾಜ್ಯಹಣಕಾಸು ಮುಕ್ತ ನಿಧಿಯಿಂದ ಒಟ್ಟು 4.20 ಲಕ್ಷರು. ಗಳನ್ನು ವಿನಿಯೋಗಿಸಿ ಬೆಂಗಳೂರಿನ ಲಕ್ಷ್ಮಿವೇಂಕಟೇಶ್ವರ ಏಜೆನ್ಸಿ ಮೂಲಕ ಈ ಬೃಹತ್ ಕಂಟೈನರ್‌ಗಳನ್ನು ತರಿಸಿತ್ತು. ಆದರೆ ಡಂಪರ್‌ಪ್ಲಸರ್ ವಾಹನ ಸರಬರಾಜು ಮಾಡುವ ಟೆಂಡರ್ ಪಡೆದಿದ್ದ ಬೆಂಗಳೂರಿನ ಮೂಲದ ಕಂಪನಿಯೊಂದು ವಾಹನಗಳನ್ನು ಸರಬರಾಜು ಮಾಡಲು ವಿಫಲಗೊಂಡ ಕಾರಣ ಕಳೆದ 3 ವರ್ಷಗಳ ಹಿಂದೆ ತರಲಾಗಿರುವ ಬೃಹತ್ ಕಂಟೈನರ್‌ಗಳು ತುಕ್ಕು ಹಿಡಿಯುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement