ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೇಲೂರು ತಾ.: ಭಾರಿ ಮಳೆ, ಗಾಳಿಗೆ ಧರೆಗುರುಳಿದ ಮನೆ

Mainashree
Updated On : 22 May 2014, 9:41 am

ಕನ್ನಡಪ್ರಭ ವಾರ್ತೆ, ಬೇಲೂರು, ಮೇ 22
ತಾಲೂಕಿನಲ್ಲಿ ಬುಧವಾರ ಸುರಿದ ಭಾರಿ ಬಿರುಗಾಳಿ ಮಳೆಗೆ ಜನರು ತತ್ತರಿಸಿದ್ದು, ಮನೆ ಬಿದ್ದಿರುವ ಘಟನೆ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಲ್ಲಹಳ್ಳಿ ಗ್ರಾಮದ ರತ್ಮಮ್ಮ ಬಿನ್ ಹಲಗೇಗೌಡ ಎಂಬುರಿಗೆ ಸೇರಿದ ಮನೆಯಾಗಿದ್ದು, ಮನೆ ಬಿದ್ದ ಕಾರಣ ಮನೆ ಮಂದಿ ರಸ್ತೆಯ ಬದಿಯಲ್ಲಿ ವಾಸ ಮಾಡುವ ದುಸ್ಥಿತಿ ಒದಗಿದೆ. ಅಲ್ಪ-ಸ್ವಲ್ಪ ಜಮೀನು ಹೊಂದಿರುವ ಇವರು ಸಾಲ-ಸೋಲ ಮಾಡಿ ಕಳೆದ 15 ವರ್ಷದ ಹಿಂದೆ ಮನೆ ಕಟ್ಟಿಕೊಂಡಿದ್ದರು. ಬೀರುಗಾಳಿಯ ಒತ್ತಡಕ್ಕೆ ಮನೆಯ ಚಾವಣಿ ಹಾರಿದ ಪರಿಣಾಮ ಇಟ್ಟಿಗೆಗಳು ನೆಲಕ್ಕೆ ಉರುಳಿದೆ.
ಇನ್ನು ಮನೆಯ ಅಡಿಗೆ ಕೋಣೆ ಸಂಪೂರ್ಣ ಹಾಳಾಗಿದ್ದು, ವಾಸ ಮಾಡುವ ಸ್ಥಿತಿಯಲ್ಲಿ ಇಲ್ಲ, ಮನೆ ಒಳಗಿನ ವಸ್ತುಗಳನ್ನು ಬಯಲು ಪ್ರದೇಶಕ್ಕೆ ಸಾಗಿಸಿ ಅಲ್ಲಿ ಗುಡಾರ ಹಾಕಿಕೊಂಡು ಕಾಲ ದೂಡುವ ಪರಿಸ್ಥಿತಿ ಎದುರಾಗಿದೆ ಎಂದು ಮನೆ ಕಳೆದುಕೊಂಡ ರತ್ನಮ್ಮ ಆಳಲು ತೊಂಡಿಕೊಂಡರು.ಈ ದಿಸೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಕ್ತ ಸ್ಥಳ ಪರಿಶೀಲನೆ ನಡೆಸುವ ಮೂಲಕ ನಮಗೆ ನ್ಯಾಯ ನೀಡಬೇಕು, ಮನೆ ಬಿದ್ದು ಸುದ್ದಿ ತಿಳಿದರೂ ಇಲ್ಲಿಯವರೆಗೆ ಯಾವ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement