ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯಗಚಿ ಭೂ ಗುತ್ತಿಗೆ: ಗುಂಪುಗಳ ಘರ್ಷಣೆ

Mainashree
Updated On : 22 May 2014, 9:40 am

ಕನ್ನಡಪ್ರಭ ವಾರ್ತೆ,  ಬೇಲೂರು, ಮೇ 22
ಯಗಚಿ ಯೋಜನೆಗೆ ಸಂಬಂಧಪಟ್ಟ ಡಣಾಯಕನಹಳ್ಳಿ ಗ್ರಾಮದಲ್ಲಿ 2.5 ಎಕರೆ ಭೂಮಿ ಬಿಡಿಸಿಕೊಳ್ಳುವ ವಿಚಾರದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದ ಘಟನೆ ಬುಧವಾರ ನಡೆದಿದೆ.
ಡಣಾಯಕನಹಳ್ಳಿ ಗ್ರಾಮದಲ್ಲಿ ಯಗಚಿ ಜಲಾಶಯ ಯೋಜನೆಗೆ ಸಂಬಂಧಿಸಿದ 2.5 ಎಕರೆ ಭೂಮಿಯಲ್ಲಿ ಯಲ್ಲಯ್ಯ ಎಂಬುವರು 14 ವರ್ಷದಿಂದ ಬೆಳೆ ಬೆಳೆಯುತ್ತಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಇದೇ ಗ್ರಾಮದವರಾದ ಕುಮಾರ್, ಭೂಮಿ ಉಳುಮೆ ಮಾಡುತ್ತಿರುವ ಬಗ್ಗೆ ಸುದ್ದಿ ಮಾಡುವಂತೆ ಕೋರಿ ಪತ್ರಕರ್ತರನ್ನು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು.
ಈ ವೇಳೆ ತಗಾದೆ ತೆಗೆದ ಭೂಮಿ ಉಳುಮೆ ಮಾಡುತ್ತಿರುವ ಯಲ್ಲಯ್ಯ ಅವರ ಸಹೋದರರಾದ ಕೃಷ್ಣಯ್ಯ, ಅಣ್ಣಪ್ಪ, ಚಿಕ್ಕಯ್ಯ ಮಾಧ್ಯಮದವರು ಫೋಟೊ ತೆಗೆಯದಂತೆ ತಡೆ ಒಡ್ಡಿದರಲ್ಲದೆ ಮಾಧ್ಯಮದವರನ್ನು ಸ್ಥಳಕ್ಕೆ ಕರೆದುಕೊಂಡು ಬಂದ ಕುಮಾರ್ ಮೇಲೆ ಕೋಪಗೊಂಡರು. ಈ ಸಂದರ್ಭದಲ್ಲಿ ಯಲ್ಲಯ್ಯ ಸಹೋದರರು ಹಾಗೂ ಕುಮಾರ್ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ಹೊಡೆದಾಡಿದರು.
ನಂತರ ಯಲ್ಲಯ್ಯ ಅವರ ಸಹೋದರರಾದ ಕೃಷ್ಣಯ್ಯ, ಅಣ್ಣಪ್ಪ, ಚಿಕ್ಕಯ್ಯ ಮಾಹಿತಿ ನೀಡಿ, ನಮ್ಮ ಅಣ್ಣ ಯಲ್ಲಯ್ಯ ಇದೀಗ ಬೇಲೂರು ಪಟ್ಟಣಕ್ಕೆ ತೆರಳಿದ್ದಾರೆ. ಅವರು 14 ವರ್ಷದಿಂದ ಯಗಚಿ ಯೋಜನೆ ಅಧಿಕಾರಿಗಳ ಅನುಮತಿ ಪಡೆದು ಇಲ್ಲಿ ಉಳುಮೆ ಮಾಡುತ್ತಿದ್ದೇವೆ. ಈ ಭೂಮಿಯ ಸುತ್ತ ತಂತಿಬೇಲಿ ಇದ್ದು ಗೇಟ್ ಅಳವಡಿಸಲಾಗಿದೆ.
ಯಗಚಿ ಯೋಜನೆ ಭೂಮಿಯ ರಕ್ಷಣೆಯ ಹೊಣೆಹೊತ್ತು ಕಾವಲುಗಾರನಾಗಿ ತಾತ್ಕಾಲಿಕ ನೌಕರನಾಗಿ ಯಲ್ಲಯ್ಯ ಕೆಲಸ ಮಾಡುತ್ತಿದ್ದು ಸಂಬಳದ ಬದಲು ಈ ಭೂಮಿಯಲ್ಲಿ ಬೆಳೆ ಬೆಳೆಯುವಂತೆ ಅಂದಿನ ಅಧಿಕಾರಿಗಳು ಅವರಿಗೆ ತಿಳಿಸಿದ್ದರು. ಈಗಲೂ ಈ ಭೂಮಿಯನ್ನು ಯಗಚಿ ಯೋಜನೆ ಅಧಿಕಾರಿಗಳು ಬಿಟ್ಟುಕೊಡುವಂತೆ ಸೂಚಿಸಿದರೆ ಬಿಟ್ಟುಕೊಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement