ದೃಶ್ಯ ಕಲಾ ಕಾಲೇಜು ಪ್ರವೇಶಕ್ಕೆ ಅರ್ಜಿ
ಹಾಸನ: ಮೈಸೂರಿನಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು ಪ್ರಥಮ ಮೂಲ ತರಗತಿ, ಪ್ರಥಮ ಬಿ.ಎಸ್.ಎ. ತರಗತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಥಮ ಮೂಲ ತರಗತಿಗೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರಥಮ ಬಿಎಫ್ಎ. ಪ್ರವೇಶಕ್ಕೆ ದ್ವಿತೀಯ ಮೂಲ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಪ್ರಥಮ ಮೂಲ ತರಗತಿಗೆ ಅರ್ಜಿ ಸಲ್ಲಿಸಲು ಜೂನ್ 2 ಕೊನೆಯ ದಿನವಾಗಿದೆ. ಮೈಸೂರಿನ ಟಿ.ನರಸೀಪುರ ರಸ್ತೆಯಲ್ಲಿರುವ ಭಾರತ ಸರ್ಕಾರದ ಪಠ್ಯಪುಸ್ತಕದ ಮುದ್ರಣಾಲಯದ ಆವರಣದಲ್ಲಿ ಜೂನ್ 10ರಂದು ಬೆಳಗ್ಗೆ 11ಕ್ಕೆ ಅರ್ಗತಾ ಪರೀಕ್ಷೆ ಹಾಗೂ ಮಧ್ಯಾಹ್ನ 2ಕ್ಕೆ ವೈಯಕ್ತಿಕ ಸಂದರ್ಶನ ನಡೆಯಲಿದೆ. ವಯೋವುತಿ 22 ವರ್ಷದೊಳಗಿರಬೇಕು. ಶುಲ್ಕ ಪಾವತಿಗೆ ಜೂನ್ 14 ಅಂತಿಮ ದಿನವಾಗಿದೆ. ಪ್ರಥಮ ಬಿ.ಎಫ್.ಎ.ಗೆ 24 ವೆರ್ಷದೊಳಗಿರಬೇಕು.
ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣ ಪತ್ರಿಕೆಯನ್ನು 125 ರು. ಪಾವತಿಸಿ ಖುದ್ದಾಗಿ ಅಥವಾ 150 ರು.ನ ಡಿ.ಡಿ.ಯನ್ನು ಡೀನ್, ಕಾವಾ, ಸಯ್ಯಾಜಿ ರಾವ್ ರಸ್ತೆ, ಸಿ.ಟಿ.ಐ.ಕಟ್ಟಡ, ಮೈಸೂರು ಇವರ ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಕಳುಹಿಸಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಮೇಲ್ಕಂಡ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ.