ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಠ್ಯಪುಸ್ತಕ ವಿತರಣೆಗೆ ಅಗತ್ಯ ಕ್ರಮ

Mainashree
Updated On : 23 May 2014, 9:26 am

ಅರಸೀಕೆರೆ: 2014-15ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ 1ರಿಂದ 10ನೇ ತರಗತಿಯವರೆಗೆ ಉಚಿತ ಪಠ್ಯಪುಸ್ತಕ ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ತಿಳಿಸಿದ್ದಾರೆ.
ತಾಲೂಕಿನ 428 ಸರ್ಕಾರಿ ಶಾಲೆಗಳ 23291 ವಿದ್ಯಾರ್ಥಿಗಳು ಹಾಗೂ 48 ಅನುದಾನಿತ ಶಾಲೆಗಳ 7321 ವಿದ್ಯಾರ್ಥಿಗಳಿಗೆ 2,14,777 ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು 1,77,836 ಪಠ್ಯಪುಸ್ತಕಗಳು ಈಗಾಗಲೇ ಸರಬರಾಜಾಗಿದ್ದು ಉಳಿದ 38,191 ಪಠ್ಯಪುಸ್ತಕಗಳು ಶೀಘ್ರವೇ ಸರಬರಾಜಾಗಲಿದೆ, ಅದನ್ನು ಆಯಾ ಶಾಲೆಗೆ ತಲುಪಿಸಲಾಗುವುದೆಂದು ತಿಳಿಸಿದರು.
1ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 23,291 ವಿದ್ಯಾರ್ಥಿಗಳಿಗೆ ಸಮವಸ್ತ್ರ ಆಯಾ ಶಾಲೆಯ ಮುಖ್ಯಸ್ಥರ ಮೂಲಕ ಸರಬರಾಜು ಮಾಡಲಾಗಿದೆ ಎಂದು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement