ಯಗಚಿ ಭೂಮಿಯಲ್ಲಿ ಅಕ್ರಮ ಬೇಸಾಯ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ: ಪುಟ್ಟೇಗೌಡ
ಕ.ಪ್ರ. ವಾರ್ತೆ, ಬೇಲೂರು, ಮೇ 23
ಯಗಚಿ ಇಲಾಖೆಗೆ ಸೇರಿದ ಬಹುತೇಕ ಜಮೀನಿನಲ್ಲಿ ಕೆಲವರು ಬೇಸಾಯ ಮಾಡುತ್ತಿದ್ದಾರೆ. ಡಣನಾಯಕ್ಕನಹಳ್ಳಿ ಎಲ್ಲಯ್ಯ ಎಂಬುವರು ಅಕ್ರಮ ಪ್ರವೇಶ ಮಾಡಿ ಉಳುಮೆ ಮಾಡಿತ್ತಿರುವುದು ಗಮನನಕ್ಕೆ ಬಂದಿದ್ದು, ಸ್ಥಳ ಪರಿಶೀಲಿಸಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಯಗಚಿ ಅಧಿಕಾರಿ ಪುಟ್ಟೇಗೌಡ ಹೇಳಿದರು.
ಯಗಚಿ ಜಲಾಶಯದ ಸುತ್ತ-ಮುತ್ತಲ ವ್ಯಾಪ್ತಿಯಲ್ಲಿ ಬರುವ ಬಹುತೇಕ ಜಮೀನನ್ನು ಸರ್ಕಾರ ಅಣೆಕಟ್ಟು ನಿರ್ಮಾಣ ಮಾಡುವ ಸಂದರ್ಭದಲ್ಲಿ ರೈತರ ಜಮೀನು ವಶಪಡಿಸಿಕೊಂಡ ಬಳಿಕ ಕೆಲ ಅಧಿಕಾರಿಗಳು, ಖಾಲಿ ಜಮೀನನ್ನು ಬಹು ಆದಾಯದ ವಾಣಿಜ್ಯ ಬೆಳೆ ಶುಂಠಿ ಬೆಳೆ ಬೆಳೆಯಲು ಗುತ್ತಿಗೆ ನೀಡಿದ್ದಾರೆ. ಹೀಗೆ ಅಕ್ರಮ ಸಂಪಾದನೆಯಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದರು.