ಯೋಜನಾ ನಿರ್ದೇಶಕರ ಹುದ್ದೆಗೆ ಆಹ್ವಾನ
ಹಾಸನ: ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಖಾಲಿ ಇರುವ ಯೋಜನಾ ನಿರ್ದೇಶಕರ ಒಂದು ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕ ಒಂದು ವರ್ಷದ ಕರಾರಿನ ಆಧಾರದ ಮೇಲೆ ಇದ್ದು ಆಯ್ಕೆಯಾದ ಸಿಬ್ಬಂದಿಗೆ ಮಾಸಿಕ 12,000 ರು. ಗೌರವಧನ ನೀಡಲಾಗುವುದು. ವಿದ್ಯಾರ್ಹತೆ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಎಮ್.ಎಸ್.ಡಬ್ಲ್ಯೂ ಅಭಿವಣದ್ದಿ ಅಧ್ಯಯನ ಲಾಭರಹಿತ ಸಂಸ್ಥೆಗಳ (ಎನ್.ಜಿ.ಒ) ನಿರ್ವಹಣಾ ಶಾಸ್ತ್ರ ಸ್ನಾತಕೋತ್ತರ ಪದವಿ, ಕನಿಷ್ಠ 3 ವರ್ಷಗಳ ಅನುಭವ ಇರಬೇಕು. ವಯೋವುತಿ 18-40ವರ್ಷ.
ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಜೂನ್ 4 ಕೊನೆ ದಿನ. ಅಂದು ಸಂಜೆ 5 ಗಂಟೆಯ ಒಳಗೆ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕೋಂ. ಕಾರ್ಮಿಕ ಅಧಿಕಾರಿಗಳ ಕಚೇರಿ, ಸುಪ್ರಜಾ ಕಟ್ಟಡ, ಅರಳಿಕಟ್ಟೆ ರಸ್ತೆ, ಹಾಸನ ಇಲ್ಲಿಗೆ ಸಲ್ಲಿಸುವುದು. ಹಾಗೂ ಅರ್ಜಿ ನಮೂನೆಯನ್ನು ಮೇಲ್ಕಂಡ ವಿಳಾಸದ ಕಚೇರಿಯಲ್ಲಿ ಸಂಜೆ 5.30 ರೊಳಗೆ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ 08172-235447.