ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸಗೊಬ್ಬರ ದಾಸ್ತಾನು ಸಂಗ್ರಹ ನಾಮಫಲಕಕ್ಕೆ ಸೂಚನೆ

Mainashree
Updated On : 23 May 2014, 9:13 am

ನುಗ್ಗೇಹಳ್ಳಿ, ಚನ್ನರಾಯಪಟ್ಟಣ ತಾ.: ಫ್ಯಾಕ್ಟ ಕಂಪನಿಯ ರಸಗೊಬ್ಬರವನ್ನು 9 ರು. ಲಾಭಪಡೆದು ಕೃಷಿಪತ್ತಿನ ಸಹಕಾರ ಸಂಘಗಳಲ್ಲಿ  ದಾಸ್ತಾನು ್ಣಸಂಗ್ರಹ ನಾಮಫಲಕ ಹಾಕಬೇಕು ಹಾಗೂ ಹೆಚ್ಚು ಗೊಬ್ಬರ ಸಂಗ್ರಹಿಸಿ ಪ್ರತಿದಿನ ಮಾರಾಟ ಮಾಡಬೇಕೆಂದು ಶಾಸಕ ಸಿ.ಎನ್, ಬಾಲಕೃಷ್ಣ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಇಲ್ಲಿಗೆ ಸಮೀಪದ ತಗಡೂರು ಕೃಷಿ ಪತ್ತಿನ ಸಂಘದ ವತಿಯಿಂದ ಪ್ರಥಮ ಬಾರಿಗೆ ಗೊಬ್ಬರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದರು.
ನವಿಲೆ ಏತ ನೀರಾವರಿಯಿಂದ ತಗಡೂರು ಭಾಗದ 18 ಕೆರೆಗಳಿಗೆ ಕುಡಿಯುವ ನೀರು ಹರಿಸಲು ಅಧಿಕಾರಿಗಳು ನಕ್ಷೆ ತಯಾರಿಸಿದ್ದು ನೀರಾವರಿ ನಿಗಮಕ್ಕೆ ಮನವರಿಕೆ ಮಾಡಿ ನೀರು ಹರಿಸಲು ಹೋರಾಟ ನಡೆಸುತ್ತೆನೆ ಎಂದರು. ಜಿಲ್ಲಾ ಬ್ಯಾಂಕ್ 450 ಕೋಟಿ ಫಿಕ್ಸೆಡ್ ಸಂಗ್ರಹಿಸಿದ್ದು 130 ಕೋಟಿ ಸಾಲ ನೀಡಿದೆ. ರೈತರು ಸ್ವಂತ ಬಂಡವಾಳ ಹೂಡಲು 20 ಸಾವಿರದಷ್ಟು ಕಮಿಷನ್ ನೀಡಲು ಸೂಚಿಸಿದರು.
ತಾಲೂಕಿನಲ್ಲೇ ಮಾದರಿಯಾಗಿ ಜನಸೇವೆ ಮಾಡುತ್ತಿರುವ ತಾಲ್ಲೂಕು ಪಂಚಾಯಿತಿ ಸದಸ್ಯ ಓಬಳಾಪುರ ಎನ್.ಬಸವರಾಜು ತಾ.ಪಂ.ಯಲ್ಲಿ ಸಂಪೂರ್ಣ ಹಣ ಉಪಯೋಗಿಸಿ ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ ಎಂದು ಅವರ ಸೇವೆಯನ್ನು ನೆನೆದರು.
ಸಮಾರಂಭದಲ್ಲಿ ತಾಪಂ ಸದಸ್ಯ ಎನ್.ಬಸವರಾಜು, ಗ್ರಾ.ಪಂ ಅಧ್ಯಕ್ಷ ಎಲ್.ಐ.ಸಿ ಎಲ್.ಡಿ ಪುಟ್ಟರಾಜು ಕೃಷಿ ಪತ್ತಿನ ಅಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಗಿರೀಶ್, ಬಿ.ಪಿ ನಾಗರಾಜು, ಜಗದೀಶ್, ಆರ್.ಕೆ ರಾಜು, ಚುಂಚಯ್ಯ, ಬಿ.ಕೆ ಬಸವರಾಜು, ಟಿ.ಎಂ ಗಿರೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement