ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲಭ್ಯ ನೀರಿನ ಮೂಲವನ್ನಾಧರಿಸಿ ಕೃಷಿ

Mainashree
Updated On : 23 May 2014, 9:13 am

ಕನ್ನಡಪ್ರಭ ವಾರ್ತೆ,  ಹೊಳೆನರಸೀಪುರ, ಮೇ 23
ಜಿಲ್ಲೆಯಲ್ಲಿನ ಉಳಿದ ತಾಲೂಕುಗಳಿಗೆ ಹೋಲಿಸಿದಲ್ಲಿ ಹಿಂದಿನ ವರ್ಷಗಳಿಗಿಂತ ಈ ವರ್ಷ ಮಳೆಯ ಪ್ರಮಾಣ ಕಡಿಮೆ ಆಗಿದ್ದರೂ ಇಲ್ಲಿನ ರೈತರು ಮಾತ್ರ ಲಭ್ಯವಿರುವ ನೀರಿನ ಮೂಲಗಳನ್ನಾಧರಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆಂದು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್ ತಿಳಿಸಿದ್ದಾರೆ.
ತಾಲೂಕಿನ ಕೆಲವಡೆ ಮಳೆ ಅಲ್ಪಸ್ವಲ್ಪ ಬಿದ್ದಿದ್ದರೂ ರೈತರು ಕೃಷಿ ಸಂಪರ್ಕ ಕೇಂದ್ರದಿಂದ ಮುಸುಕಿನ ಜೋಳ ಪಡೆಯಲು ಅತ್ಯಂತ ಉತ್ಸುಕತೆ ತೋರಿದ್ದಾರೆ. ಜೊತೆಗೆ ದ್ವಿದಳ ಧಾನ್ಯಗಳನ್ನು ಬೆಳೆಯಲು ಉತ್ಸುಕತೆ ತೋರಿರುವುದು ವಿಶೇಷವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಅಲಸಂದೆ ಮತ್ತು ರಾಗಿ ಬಿತ್ತನೆ ಬೀಜ ಪಡೆಯುವಲ್ಲಿ ರೈತರು ಹಿಂದೇಟು ಹಾಕುತ್ತಿದ್ದು, ಈ ಬಾರಿ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ರೈತರು ಬತ್ತದ ಕೃಷಿಯೆಡೆಗೆ ಇನ್ನೂ ಮುಖ ಮಾಡಿಲ್ಲ, ಕಳೆದ ವರ್ಷ ಈ ವೇಳೆಗೆ ತಾಲೂಕಿನಲ್ಲಿ ಮುಂಗಾರು ಮಳೆ ಚೆನ್ನಾಗಿ ಬಂದಿದ್ದರಿಂದ ರೈತರು ಬತ್ತ, ರಾಗಿ ಬೆಳಗೆ ಹೆಚ್ಚು ಒತ್ತು ನೀಡಿದ್ದರು. ಈ ಭಾರಿ ಮುಂಗಾರು ಮಳೆ ಬಾರದೆ ದಿನನಿತ್ಯ ಆಕಾಶದಲ್ಲಿ ಕಪ್ಪು ಮೋಡಗಳು ಕಾಣಿಸಿಕೊಂಡು ಇದ್ದಕ್ಕಿದ್ದಂತೆ ಮರೆಯಾಗುತ್ತಿರುವುದು ರೈತರನ್ನು ಪೇಚಿಗೆ ಸಿಲುಕಿಸಿದೆ. ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಬಹಳಷ್ಟು ಗ್ರಾಮಗಳಲ್ಲಿ ಅಲ್ಪಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಈ ಭಾಗದ ರೈತರು ತಮ್ಮ ಜೀವನಾಡಿ ಬೆಳೆಯಾದ ತಂಬಾಕು ಬೆಳೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement