ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವರದಕ್ಷಿಣೆಗಾಗಿ ಮಹಿಳೆ ಕೊಲೆ

Mainashree
Updated On : 24 May 2014, 9:33 am

ಕನ್ನಡಪ್ರಭ ವಾರ್ತೆ, ಹಾಸನ. ಮೇ 24
ವರದಕ್ಷಿಣೆಗಾಗಿ ಪತಿ ಹಾಗೂ ಆತನ ಮನೆಯವರು ನಯನಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ನಯನಾಳ ಕುಟುಂಬವದರು ಗಂಡನ ಮನೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಗರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಮೃತ ನಯನಾಳ ಕಡೆಯವರು, ದಾಂಧಲೆ ನಡೆಸಿದ್ದರಿಂದ ಮನೆಯ ಕಿಟಕಿ ಗಾಜು, ಗೇಟ್ ಜಖಂಗೊಳಿಸಿದ್ದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಮಧ್ಯೆ ನಯನಾ ಸಾವಿಗೆ ಕಾರಣ ಎನ್ನಲಾದ ಆಕೆಯ ಪತಿ ಮಂಜುನಾಥ್‌ನನ್ನು ಮಂಗಳೂರಿನ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಬ್ಬಿನಹಳ್ಳಿಯ ನಯನಾಳ ಮೃತಪಟ್ಟ ದುರ್ದೈವಿ.
ನಯನಾಳನ್ನು ಹಾಸನದ ಮಂಜುನಾಥ್‌ಗೆ ಆ.6, 2012 ರಂದು ಮದುವೆ ಮಾಡಿಕೊಡಲಾಗಿತ್ತು. ಪತಿ ಮಂಜುನಾಥ್ ಎಂಟೆಕ್ ಮುಗಿಸಿ ಸುರತ್ಕಲ್‌ನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ ನಾಗಿ ಕೆಲಸ ನಿರ್ವಹಿಸುತ್ತಿದ್ದರು. ಆರ್ಥಿಕವಾಗಿ ಚೆನ್ನಾಗಿದ್ದರು. ಹೆಚ್ಚಿನ ಹಣ ತರುವಂತೆ ಮಂಜುನಾಥ್ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಶುಕ್ರವಾರ ರಾತ್ರಿ ತಾನು ಕೆಲಸದಲ್ಲಿದ್ದ ಮಂಗಳೂರಿನ ಸುರತ್ಕಲ್‌ನಲ್ಲಿ ನಯನಾಳನ್ನು ಕೊಲೆಮಾಡಿ ನಂತರ ನೇಣು ಹಾಕಿದ್ದಾನೆ ಎನ್ನಲಾಗಿದೆ. ಮದುವೆ ವೇಳೆ 380 ಗ್ರಾಂ ಚಿನ್ನ ಮತ್ತು ಒಂದೂವರೆ ಲಕ್ಷ ರು. ವರದಕ್ಷಿಣೆ ನೀಡಲಾಗಿತ್ತು. ಆದ್ರೆ ಮದುವೆ ಆದಾಗಿನಿಂದಲೂ ಪತ್ನಿಗೆ ಕಿರುಕುಳ ನೀಡುತ್ತಿದ್ದ ಮಂಜುನಾಥ್ ಮತ್ತು ಆತನ ಮನೆಯವರು ಹೆಚ್ಚಿನ ಹಣ ತರುವಂತೆ ಪೀಡಿಸುತ್ತಿದ್ದರು. ಅಲ್ಲದೇ ನಯನಾಳನ್ನು ಅನುಮಾನದಿಂದ ನೋಡುತ್ತಿದ್ದನ್ನು ಎಂದು ನಯನಾಳ ಕುಟುಂಬದವರು ಆರೋಪಿದ್ದಾರೆ.
ಎಂಕಾಂ ಪದವೀಧರೆಯಾಗಿದ್ದ ನಯನಾ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿತ್ತು. ಮುಂದಿನವಾರ ಟ್ರೈನಿಂಗ್‌ಗೆ ಹೋಗಬೇಕಿತ್ತು. ಇಷ್ಟು ಸಾಲದು ಎಂಬಂತೆ ಮಂಜನಾಥ್‌ನ ಪೋಷಕರು ಸರ್ಕಾರಿ ಹುದ್ದೆಯಲ್ಲಿದ್ದಾರೆ. ತಮ್ಮ ಮನೆಯವರೆಲ್ಲಾ ದೊಡ್ಡ ದೊಡ್ಡ ಕೆಲಸದಲ್ಲಿ ಇರುವುದರಿಂದ, ನಯನಾಳೂ ಕೆಲಸಕ್ಕೆ ಹೋಗುವುದು ಮಂಜುನಾಥ್‌ಗೆ ಇಷ್ಟವಿರಲಿಲ್ಲ ಎನ್ನಲಾಗಿದೆ.
ಅಲ್ಲದೇ ನಯನಾಳನ್ನು ಮಂಜುನಾಥ್ ಅನುಮಾನಿಸಿ ಚಿತ್ರಹಿಂಸೆ ನೀಡುತ್ತಿದ್ದ. ಇದಲ್ಲದೇ ಮಂಜುನಾಥ್‌ನದ್ದು ವಿಚಿತ್ರ ಸ್ವಭಾವ ಎನ್ನಲಾಗಿದೆ. ಈ ಎಲ್ಲ ಕಾರಣಗಳಿಂದ ಪತ್ನಿ ನನ್ನ ಸರಿ ಸಮಾನಳಾಗಿದ್ದರೆ ಭವಿಷ್ಯದಲ್ಲಿ ನನಗೇ ತೊಂದರೆ ಎಂದು ಭ್ರಮಿಸಿ ಪತ್ನಿಯನ್ನು ಕೊಲೆ ಮಾಡಿ ನಂತರ ನೇಣು ಹಾಕಿದ್ದಾನೆ. ಇಂಥವನಿಗೆ  ತಕ್ಕಶಾಸ್ತಿಆಗಬೇಕು ಅನ್ನೋದು ನೊಂದವರ ಆಗ್ರಹವಾಗಿದೆ.
ಶುಕ್ರವಾರ ರಾತ್ರಿ ನಯನಾಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿ ಪರಾರಿಯಾಗಿದ್ದ ಪತಿ ಮಂಜುನಾಥ್‌ನನ್ನು ಸುರತ್ಕಲ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮಂಜುನಾಥ್‌ನ ತಂದೆ ಕೃಷ್ಣ ಮತ್ತು ತಾಯಿ ವರಲಕ್ಷ್ಮಿ ತಲೆ ಮರೆಸಿಕೊಂಡಿದ್ದಾರೆ.

ನಯನಾಳನ್ನು ಮದುವೆ ಯಾದಾಗಿನಿಂದಲೂ ಹಣ ತರುವಂತೆ ಕಿರುಕುಳ ನೀಡುತ್ತಿದ್ದ. ಆರ್ಥಿಕವಾಗಿ ಚೆನ್ನಾಗಿದ್ದರು ಸಹ ಹಣ ತಕೋಬಾ ಅಂದ ನಯನಾಗೆ ಚಿತ್ರಹಿಂಸೆ ನೀಡುತ್ತಿದ್ದ. ಈಗ ಕೊಲೆ ಮಾಡಿದ್ದಾನೆ. ಅವರ ಮನೆಯವರು ಕೆಲಸದಲ್ಲಿ ಇದ್ದರೂ ಹಣದ ಆಸೆ ಹೆಚ್ಚಾಗಿತ್ತು. ಅರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು.
ಟಿ  ಜಯಪ್ರಕಾಶ್, ಸಂಬಂಧಿ
ಮದುವೆಯನ್ನು ಬಹಳ ಚೆನ್ನಾಗಿ ಮಾಡಿಕೊಟ್ಟು ವರದಕ್ಷಿಣೆಯನ್ನು ನೀಡಲಾಗಿತ್ತು. ಆದರೂ ಪದೇಪದೆ ವರದಕ್ಷಿಣಿ ತರುವಂತೆ ಪೀಡಿಸುತ್ತಿದ್ದ. ಈಗ ಕೊಲೆ ಮಾಡಿ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಬಿಂಬಿಸಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಕೊಲೆ.
ಟಿ  ಲತಾ, ಮೃತರಚಿಕ್ಕಮ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement