ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಏಕರೂಪ ಶಿಕ್ಷಣ ಪದ್ಧತಿಯಿಂದ ಮಾತ್ರ ಪರಿಹಾರ

Mainashree
Updated On : 25 May 2014, 9:32 am

ಕನ್ನಡಪ್ರಭ ವಾರ್ತೆ, ಹಾಸನ. ಮೇ 25
ಜಾಗತೀಕರಣ ಸಂದರ್ಭದಲ್ಲಿ ಶಿಕ್ಷಣ, ದೇಶಕ್ಕೆ ದೊಡ್ಡ ಸವಾಲಾಗಿದ್ದು, ಏಕರೂಪ ಶಿಕ್ಷಣ ಪದ್ಧತಿಯಿಂದ ಮಾತ್ರ ಈ ದೇಶದ ಶಿಕ್ಷಣ ಪದ್ಧತಿಯ ಅಸಮಾನತೆಗೆ ಪರಿಹಾರ ಮಾರ್ಗ ಎಂದು ಸರ್ಕಾರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಲಾ ಕಾಲೇಜು ಸಂಯೋಜಕ ಡಿ.ಜಿ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನೂತನವಾಗಿ ಆರಂಭವಾಗಿರುವ ಶಾಕ್ಯ ಇಂಟರ್ ನ್ಯಾಷನಲ್ ಫ್ರೀ ಸ್ಕೂಲ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಪ್ರಸ್ತುತ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತಕ್ಕೆ ಬಂದು ಶಿಕ್ಷಣ ನೀಡುತ್ತಿವೆ. ಭಾರತ ಕೂಡ ಇದಕ್ಕೆ ಅನುಮತಿ ನೀಡಿದೆ. ಸಮಾಜದ ಬಗ್ಗೆ ಗೌರವ ಇರುವವರು ಇಲ್ಲಿನ ಪರಿಸರ ಸಂಪನ್ಮೂಲಗಳನ್ನು ಬಳಸಿಕೊಂಡು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಬೇಕು ಇಲ್ಲವಾದಲ್ಲಿ ಭಾರತ ಶಿಕ್ಷಣ ಕ್ಷೇತ್ರದಲ್ಲೂ ವಿದೇಶಿಯರಿಗೆ ಪರಾವಲಂಬಿಗಳಾಗುವ ದಿನ ದೂರವಿಲ್ಲ ಶಿಕ್ಷಣ ನೀಡುವುದು ಎಂದರೆ ದೇಶ ಕಟ್ಟುವ ಕಾರ್ಯ. ಇಂದಿನ ಹೊಸ ಸವಾಲುಗಳಿಗೆ ಹೊಂದಿಕೊಂಡು ಹೊಸ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸವಾಲುಗಳಿಗೆ ತೆರೆದುಕೊಳ್ಳಬೇಕು ಎಂದರು. ಕನ್ನಡದ ಜತೆ ಇಂಗ್ಲಿಷ್ ಇಂದು ಅನಿವಾರ್ಯ ಭಾಷೆಯಾಗಿದೆ. ಈ ನಿಟ್ಟಿನಲ್ಲಿ ನಿಟ್ಟೂರಿನಂತಹ ಗ್ರಾಮದಲ್ಲಿ ಅಂತರಾಷ್ಟ್ರೀಯ ಗುಟ್ಟಮಟ್ಟದ ಶಾಲೆಯೊಂದನ್ನು ಆರಂಭಿಸಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಪ್ರಪಂಚದಲ್ಲಿ 400 ವಿಶ್ವವಿದ್ಯಾಲಯಗಳ ಪೈಕಿ ಭಾರತ ಅತ್ಯಂತ ಕೆಳಗಿದೆ. 385ನೇ ಸ್ಥಾನ ಪಡೆದಿರುವುದೇ ಈವರೆಗಿನ ಸಾಧನೆ. ಈ ನಿಟ್ಟಿನಲ್ಲಿ ಶಿಕ್ಷಣ ಪದ್ಧತಿಯಲ್ಲಿ ಮಹತ್ತರ ಬದಲಾವಣೆಗಳಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸ್ನಾತಕೋತ್ತರ ಕೇಂದ್ರದ ಎಂ.ಕೆ.ದ್ಯಾವಪ್ಪ, ಚಿನ್ನ ಬೆಳ್ಳಿ ವರ್ತಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಪ್ರಮೋದ್, ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್, ಆರ್. ಪಿ. ಐ. ಸತೀಶ್, ಸಂಸ್ಥೆಯ ಕಾರ್ಯದರ್ಶಿ ನಿಟ್ಟೂರು ಸ್ವಾಮಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಶಿಕ್ಷಕ ನಿಂಗರಾಜು, ಶಿವಣ್ಣ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ನಿಟ್ಟೂರು, ಬಾಲಕೃಷ್ಣಮೂರ್ತಿ, ನಾಗರಾಜ್, ಲೋಕೇಶ್, ಶಿಕ್ಷಕಿಯರಾದ ಎಚ್.ಕೆ. ಶಿಲ್ಪಾ, ಶ್ರುತಿ, ಸಿಂಧು, ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement