ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾರ್ಮಿಕನ ಮೇಲೆ ಹಲ್ಲೆ ದ್ವಿಚಕ್ರ ವಾಹನ ಜಖಂ

Mainashree
Updated On : 25 May 2014, 9:31 am

ಕನ್ನಡಪ್ರಭ ವಾರ್ತೆ, ಹಾಸನ. ಮೇ 25
ನಗರದ ನ್ಯೂ ಮಿನರ್ವ ಮಿಲಲ್ಕಾರ್ಖಾನೆಯಲ್ಲಿ ಶನಿವಾರ ಕಾರ್ಮಿಕನೊಬ್ಬನ ಮೇಲೆ ಇಬ್ಬರು ಸಹೋದ್ಯೋಗಿಗಳು ಹಲ್ಲೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಕಾರ್ಖಾನೆಯ ಎಲೆಕ್ಟ್ರಿಕಲ್ ವಿಭಾಗದ ಕಾರ್ಮಿಕ ಪ್ರವೀಣ್ ಮೇಲೆ ಪಿ.ಆರ್. ಕೇಶವಮೂರ್ತಿ ಹಾಗೂ ಎಚ್.ಕೆ.ಪ್ರವೀಣ್ ಎಂಬವರು ಹಲ್ಲೆ ನಡೆಸಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರವೀಣ್ ಚಿಕಿತ್ಸೆ ಪಡೆದಿದ್ದಾರೆ.
ಕೇಶವಮೂರ್ತಿ ಹಾಗೂ ಎಚ್.ಕೆ.ಪ್ರವೀಣ್ ಕಾರ್ಮಿಕ ಸಂಘದ ವಿರುದ್ಧ ನಡೆದುಕೊಳ್ಳುತ್ತಿದ್ದರು. ಹೀಗಾಗಿ ಅವರನ್ನು ಬೇರೆಡೆಗೆ ವರ್ಗ ಮಾಡುವಂತೆ ಆಡಳಿತ ಮಂಡಳಿಗೆ ಕೋರಲಾಗಿತ್ತು. ಇದಕ್ಕೆ ಪ್ರವೀಣ್ ಕಾರಣ ಎಂದು ಭಾವಿಸಿ, ಶನಿವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹೊರಟಿದ್ದ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ಪ್ರವೀಣ್ ಮೂಗಿಗೆ ಗಾಯವಾಗಿದ್ದು, ಆತನ ದ್ವಿಚಕ್ರ ವಾಹನವನ್ನು ಜಖಂಗೊಳಿಸಲಾಗಿದೆ.
ಘಟನೆಯಿಂದ ಆಕ್ರೋಶಗೊಂಡ ಇತರೆ ಕಾರ್ಮಿಕರು ಹಲ್ಲೆ ನಡೆಸಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆಗೆ ಮುಂದಾದರು.
ಪ್ರಕರಣದ ಮಾಹಿತಿ ಪಡೆದ ಎಸ್ಪಿ ರವಿ ಡಿ.ಚನ್ನಣ್ಣನವರ್ ಘಟನೆ ನಡೆದಿರುವ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದರು. ಅದರಂತೆ ಪ್ರವೀಣ್ ತಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಪಿ.ಆರ್.ಕೇಶವಮೂರ್ತಿ ಹಾಗೂ ಎಚ್.ಕೆ.ಪ್ರವೀಣ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement