ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಾನವತಾವಾದಿ ಅಂಬೇಡ್ಕರ್

Mainashree
Updated On : 26 May 2014, 9:38 am

ಆಲೂರು:  ಸಾಮಾಜಿಕ ಅಸಮಾನತೆ, ಜಾತೀಯತೆ, ಆರ್ಥಿಕ, ಶೈಕ್ಷಣಿಕ ಹಾಗೂ ಮೌಢ್ಯಗಳ ವಿರುದ್ಧ ಹೋರಾಡಿದ ಮಹಾ ಮಾನವತಾವಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯುತ್ಸವ ಆಚರಿಸುತ್ತಿರುವುದು ನಮ್ಮ ಸೌಭಾಗ್ಯವೆಂದು ಸರ್ವಜನ ಸಮಾಜ ವೇದಿಕೆ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಹೇಳಿದರು.
ಅವರು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಕರ್ನಾಟಕ ದಸಂಸ ಹಾಗೂ ಎಸ್ಸಿಎಸ್ಟಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 123ನೇ ಜಯಂತ್ಯುತ್ಸುವದಲ್ಲಿ ಮಾತನಾಡಿದರು.  
ಶಾಸಕ ಕುಮಾರಸ್ವಾಮಿ, ಮಾತನಾಡಿ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ ಹಿಂದುಳಿದ ಜಾತಿಗಳು ಹಲವು ಸೌಲಭ್ಯಗಳಿಂದ ವಂಚಿತವಾಗಿವೆ. ಇದಕ್ಕೆ ಕಾರಣ ಈ ದೇಶವನ್ನಾಳುತ್ತಿರುವ ಸರ್ಕಾರಗಳು ಈ ಜನಾಂಗಗಳನ್ನು ಮುಖ್ಯವಾಹಿನಿಗೆ ತರುವುದರ ಬಗ್ಗೆ ಯೋಚಿಸದೆ ಕೇವಲ ಅಂಬೇಡ್ಕರ್ ವಿಚಾರಧಾರೆಗಳನ್ನು ದಲಿತರ ಓಟ್ ಬ್ಯಾಂಕ್‌ಗಾಗಿ ಬಳಸುತ್ತಿವೆ ಅಂಬೇಡ್ಕರ್‌ರಂತಹ ಮಹಾ ಪುರುಷರ ಹಾದಿಯಲ್ಲಿ ನಡೆದು ನಾವೆಲ್ಲರು ವಿಶ್ವ ಮಾನವರಾಗೋಣ ಎಂದರು. ಅಂಬೇಡ್ಕರ್ ಭಾವಚಿತ್ರವನ್ನು ನಿವೃತ್ತ ಅಬಕಾರಿ ಅಧಿಕಾರಿ ನಾರಾಯಣದಾಸ್ ಅನಾವರಣಗೊಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement