ಅನಧಿಕೃತ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಡಿ: ಬಿಇಒ
ಅರಕಲಗೂಡು: ತಾಲೂಕಿನಲ್ಲಿರುವ ಅನಧಿಕೃತ ಖಾಸಗಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸದಿರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ ಮನವಿ ಮಾಡಿದ್ದಾರೆ.
ಶಿಕ್ಷಣ ಇಲಾಖೆಯ ಎಚ್ಟರಿಕೆಯ ನಡುವೆಯೂ ಪೋಷಕರು ಅನಧಿಕೃತ ಶಾಲೆಗಳಿಗೆ ಸೇರಿಸಿದಲ್ಲಿ ಅವರೇ ನೇರ ಹೊಣಗಾರರು. ಇಲಾಖೆ ಜವಾಬ್ದಾರಿಯಲ್ಲ ಎಂದಿದ್ದಾರೆ. ಈ ಸಂಬಂಧ ಅನಧಿಕೃತ ಹಾಗೂ ಇಲಾಖೆ ಮಾನ್ಯತೆ ಪಡೆಯದೇ ಇರುವ ಶಾಲೆಗಳ ಹೆಸರು ಬಿಡುಗಡೆಗೊಳಿಸಿದ್ದು, ಅಂತಹ ಶಾಲೆಗಳು ಮಕ್ಕಳನ್ನು ದಾಖಲು ಮಾಡಿಕೊಂಡಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣಾಧಿಕಾರಿ ರೇವಣ್ಣ ಎಚ್ಚರಿಸಿದ್ದಾರೆ.
ಅನುಮತಿ ಪಡೆಯದ ಶಾಲೆಗಳು: ಅರ್ಕೇಶ್ವರ ಶಾಲೆ,ಅರಕಲಗೂಡು(ಪೂರ್ವ ಪ್ರಾಥಮಿಕ), ಸ್ವಾಮಿ ವಿವೇಕಾನಂದ ಶಾಲೆ,ಅರಕಲಗೂಡು-6 ಮತ್ತು 7ನೇ ತರಗತಿ, ಲಕ್ಷ್ಮೀ ವಿದ್ಯಾಲಯ, ಗಂಜಲಗೂಡು-6ಮತ್ತು 7ನೇ ತರಗತಿ, ಬೆನಕ ಕಾನ್ವೆಂಟ್, ಕೋಟವಾಳು-6 ಮತ್ತು 7ನೇ ತರಗತಿ, ಕಾವೇರಿ ಮಾಂಟೇಸರಿ ಶಾಲೆ, ಕೊಣನೂರು-ಪೂರ್ವ ಪ್ರಾಥಮಿಕ, 6 ಮತ್ತು 7 ನೇ ತರಗತಿ,ಅಲ್‌ಹುದಾ ಕಾನ್ವೆಂಟ್, ಅರಕಲಗೂಡು-6 ಮತ್ತು 7ನೇ ತರಗತಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.