ಅಪಘಾತ: ಪಾದಚಾರಿ ಸಾವು
ಹಾಸನ: ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿರುವ ಘಟನೆ ನಗರದ ಬಿ.ಎಂ. ರಸ್ತೆ, ಸಂತೇಪೇಟೆ ಎಪಿಎಂಸಿ ಬಳಿ ಇತ್ತೀಚೆಗೆ ನಡೆದಿದೆ.ತಾಲೂಕಿನ ಚಿಕ್ಕಗೇಣಿಗೆರೆ ಗ್ರಾಮದ ನಿಂಗೇಗೌಡ(59) ಮೃತರು. ತೋಟಗಾರಿಕೆ ಇಲಾಖೆಯಲ್ಲಿ ಕರ್ತವ್ಯ ಮುಗಿಸಿಕೊಂಡು ಎಪಿಎಂಸಿ ಹತ್ತಿರ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎಸ್ಆರ್ಟಿಸಿ ಬಸ್ ಇವರಿಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ನಿಂಗೇಗೌಡ ಸ್ಥಳದಲ್ಲಿಯೇ ಮೃತಪಟ್ಟರು. ಈ ಸಂಬಂಧ ಬಸ್ ಚಾಲಕನ ವಿರುದ್ಧ ಮೃತರ ಮಗ ದಿನೇಶ್ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.