'ಕಾಂಗ್ರೆಸ್ಮುಕ್ತ ಭಾರತ ನಿರ್ಮಿಸಲು ಬಿಜೆಪಿ ಕಾರ್ಯಕರ್ತರು ಸಜ್ಜಾಗಬೇಕು'
ಸಕಲೇಶಪುರ: ಮುಂಬರುವ ಪಂಚಾಯ್ತಿ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕನಸಾದ 'ಕಾಂಗ್ರೆಸ್ ಮುಕ್ತ ಭಾರತ' ನಿರ್ಮಿಸಲು ಇಂದಿನಿಂದಲೇ ಸಜ್ಜಾಗಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಕಿವಿಮಾತು ಹೇಳಿದರು.
ಪಟ್ಟಣದ ಸ್ಥಳೀಯ ಬಿಜೆಪಿ ಘಟಕ ಓಂ ಮಂದಿರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನರೇಂದ್ರ ಮೋದಿ ಪ್ರಧಾಯಾಗಿದ್ದು, ದೇಶವನ್ನು ಕಾಡುತ್ತಿದ್ದ ಅನಿಶ್ಚಿತತೆ ಮಾಯವಾಗಿ ದೇಶ ಅಭಿವೃದ್ಧಿ ಪಥದತ್ತ ಸಾಗುವುದಂತೂ ನಿಶ್ಚಿತ ಎಂದರು.
ಜಿಲ್ಲೆಯಲ್ಲಿ ಅಸಂಖ್ಯಾತ ಕಾರ್ಯಕರ್ತರ ಪಡೆಯಿದೆ ಆದರೆ ಸಮರ್ಥ ನಾಯಕತ್ವವಿಲ್ಲದೆ ಸೂರಿಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಯನ್ನು ಬಲಗೊಳಿಸಲಾಗುವುದು ಎಂದರು. ಸಭೆಗೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಜಿಲ್ಲಾಧ್ಯಕ್ಷ ಬೆಣ್ಣೂರು ರೇಣುಕುಮಾರ್ ತಾಲೂಕು ಅಧ್ಯಕ್ಷ ಕ್ಯಾಮನಹಳ್ಳಿ ರಾಜ್ಕುಮಾರ್, ಮುಂಖಡರಾದ ಜೈಮಾರುತಿ ದೇವರಾಜ್, ಡಾ.ನಾರಯಣಸ್ವಾಮಿ, ಕರಡಿಗಾಲ್ ಅಪ್ಪಣ್ಣ, ಉದಯ್ಕುಮಾರ್ ಸಂದೇಶ್, ಮಂಜುನಾಥ್ ಸಿಂಘ್ವಿ ಮತ್ತಿತರರು ಉಪಸ್ಥಿತರಿದ್ದರು.