ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೃಶ್ಯಕಲಾ ಪದವಿ ಪ್ರವೇಶಕ್ಕೆ ಅರ್ಜಿ

Mainashree
Updated On : 27 May 2014, 9:29 am

ಹಾಸನ: ಮೈಸೂರಿನಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನಿಂದ ಪ್ರಥಮ ಮೂಲ ತರಗತಿ ಪ್ರಥಮ ಬಿಎಸ್‌ಎ. ತರಗತಿಗಳ ಪ್ರವೇಶಕ್ಕೆ ಆರ್ಜಿ ಆಹ್ವಾನಿಸಲಾಗಿದೆ.ಪ್ರಥಮ ಮೂಲ ತರಗತಿಗೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರಥಮ ಬಿಎಫ್‌ಎ. ಪ್ರವೇಶಕ್ಕೆ ದ್ವಿತೀಯ ಮೂಲ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.ಪ್ರಥಮ ಮೂಲ ತರಗತಿಗೆ ಅರ್ಜಿ ಸಲ್ಲಿಸಲು ಜೂನ್ 2 ಕೊನೆಯ ದಿನವಾಗಿದೆ. ಮೈಸೂರಿನ ಟಿ.ನರಸೀಪುರ ರಸ್ತೆಯಲ್ಲಿರುವ ಭಾರತ ಸರ್ಕಾರದ ಪಠ್ಯ ಪುಸ್ತಕದ ಮುದ್ರಣಾಲಯದ ಆವರಣದಲ್ಲಿ ಜೂನ್ 10 ರಂದು ಬೆಳಿಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಹಾಗೂ ಮಧ್ಯಾಹ್ನ 2 ಗಂಟೆಗೆ ವೈಯಕ್ತಿಕ ಸಂದರ್ಶನ ನಡೆಯಲಿದೆ. ವಯೋವುತಿ 22 ವರ್ಷದೊಳಗಿರಬೇಕು. ಶುಲ್ಕ ಪಾವತಿಗೆ ಜೂನ್ 14 ಅಂತಿಮ ದಿನವಾಗಿದೆ. ಪ್ರಥಮ ಬಿಎಫ್‌ಎ.ಗೆ 24 ವರ್ಷದೊಳಗಿರಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement