ಬಾಲಕಿ ಮೇಲೆ ಅತ್ಯಾಚಾರ
ಜಾವಗಲ್: ಜಾವಗಲ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ಆಕೆ ಗರ್ಭಿಣಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಸಮೀಪದ ದೇಶಾಣಿ ಗೊಲ್ಲರ ಹಟ್ಟಿ ಗ್ರಾಮದ ಬಾಲಕಿ ಮೇಲೆ ಅದೇ ಗ್ರಾಮದ ಶೇಖರ್ನಾಯ್ಕ ಎಂಬಾತ ಆಕೆಯನ್ನು ಬೆದರಿಸಿ ಕಳೆದ ಆರು ತಿಂಗಳಿನಿಂದ ಆತ್ಯಾಚಾರವೆಸಗಿದ್ದು, ಈಗ ಆಕೆ ಗರ್ಭಿಣಿಯಾಗಿದ್ದಾಳೆ. ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬಾಲಕಿ ಕಾಲೇಜಿಗೆ ಹೋಗದೆ ಕಳೆದ 2 ತಿಂಗಳಿನಿಂದ ಮನೆಯಲ್ಲಿ ಇದ್ದುದರಿಂದ ತಾಯಿ ವಿಚಾರಿಸಿದಾಗ ಶೇಖರ್ನಾಯ್ಕ ಎಂಬಾತ ಮದುವೆಯಾಗುವುದಾಗಿ ಪುಸಲಾಯಿಸಿ ಅತ್ಯಾಚಾರವೆಸಗಿದ್ದು, ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಎಂದು ಬಾಲಕಿ, ತಾಯಿ ಬಳಿ ಹೇಳಿಕೊಂಡಿದ್ದಾಳೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.