ಬೈಕ್ ಕಳವು: ವ್ಯಕ್ತಿ ಸೆರೆ
ಹೊಳೆನರಸೀಪುರ: ಬೈಕ್ ಚೋರನನ್ನು ಪೊಲೀಸರು ಬಂಧಿಸಿ ಆತನ ಬಳಿ ಬಿದ್ದ ಬೈಕನ್ನು ವಶಪಡಿಸಿಕೊಂಡ ಘಟನೆ ಇತ್ತೀಚೆಗೆ ತಾಲೂಕಿನ ನಾಗಲಾಪುರ ಗ್ರಾಮದ ಬಳಿ ನಡೆದಿದೆ.ಚಿಕ್ಕಬ್ಯಾಗತವಳ್ಳಿ ಗ್ರಾಮದ ಅಭಿಷೇಕ್(19) ಬಂಧಿತನು. ತಾಲೂಕಿನ ಗೊರೂರು-ಹೊಳೆನರಸೀಪುರ ರಸ್ತೆ ನಾಗಲಾಪುರ ಗ್ರಾಮದ ಕಡೆ ಗ್ರಾಮಾಂತರ ಠಾಣೆ ಪೇದೆಗಳಾದ ನಾಗರಾಜು ಮತ್ತು ಸತೀಶ್ ಅಪರಾಧ ಪತ್ತೆ ಕರ್ತವ್ಯದಲ್ಲಿದ್ದ ವೇಳೆ ನಾಗಲಾಪುರ ಹತ್ತಿರ ವ್ಯಕ್ತಿಯೊಬ್ಬ ಬೈಕ್ ತಳ್ಳಿಕೊಂಡು ಬರುತ್ತಿದ್ದುದನ್ನು ಕಂಡು. ಪೊಲೀಸರು ಬೈಕ್ ದಾಖಲೆ ಕೇಳಿದಾಗ, ಆತನ ಬಳಿ ಯಾವ ದಾಖನೆಗಳೂ ಇರಲಿಲ್ಲ. ನಂತರ ವಿಚಾರಣೆಗೊಳಪಡಿಸಿದಾಗ ಬೈಕ ಕಳತನ ಮಾಡಿದ್ದೆಂದು ಗೊತ್ತಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.