ಮೋದಿ ಪ್ರಮಾಣ: ಬಿಜೆಪಿ ರ್ಯಾಲಿ
ಹಾಸನ: ಭಾರತದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಗರದ ಸೀತಾರಾಮಾಂಜನೇಯ ದೇವಾಲಯದಲ್ಲಿ ಸೋಮವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸಿಹಿ ಹಂಚಿ ಕಾರ್ಯಕರ್ತರು ಬೈಕ್ರ್ಯಾಲಿ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ಮೂಲಕ ಸಂಚರಿಸಿ ಮೋದಿ ಪರ ಘೋಷಣೆ ಕೂಗಿದರು. ಇದೆ ರೀತಿ ನಗರದ ಹಲವು ಭಾಗಗಳಲ್ಲಿ ಮೋದಿ ಅಭಿಮಾನಿಗಳು ಸಂಭ್ರಮಿಸಿದರು.
ಬಿಜೆಪಿ ಮುಖಂಡ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡರಾದ ಡಿ.ವೈ. ಗೋಪಾಲ್, ಶೋಭನ್ಬಾಬು, ಅಗಿಲೆ ಯೋಗೀಶ್, ಪ್ರಸನ್ನಕುಮಾರ್, ಜೈಕುಮಾರ್, ಪುನೀತ್, ಯುವ ಮೋರ್ಚಾ ಅಧ್ಯಕ್ಷ ಚನ್ನಕೇಶವ, ನಾಗೇಶ್, ಕಟ್ಟಾಯ ಶಿವಕುಮಾರ್, ಶ್ರೀನಿವಾಸ್ಗೌಡ ಮತ್ತಿತರರು ಉಪಸ್ಥಿತರಿದ್ದರು.