ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೋಟರಿ ಸಂಸ್ಥೆಗೆ ನಾಲ್ಕು ಪ್ರಶಸ್ತಿ

Mainashree
Updated On : 27 May 2014, 9:29 am

ಹೊಳೆನರಸೀಪುರ: ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಧನೆ ತೋರುವ ಮೂಲಕ ಇಲ್ಲಿನ ರೋಟರಿ ಸಂಸ್ಥೆಯು ಆರ್.ಬಿ.ಪುಟ್ಟೇಗೌಡ ನೇತೃತ್ವದಲ್ಲಿ 2013-14ನೇ ಸಾಲಿನ ನಾಲ್ಕು ಪ್ರಶಸ್ತಿಗಳನ್ನು ಗಳಿಸಿದೆ.
ರೋಟರಿ ಜಿಲ್ಲೆ 3180 ವತಿಯಿಂದ 2013-14ನೇ ಸಾಲಿಗೆ ಹೊಳೆನರಸೀಪುರ ರೋಟರಿ ಸಂಸ್ಥೆಗೆ ನಾಲ್ಕು ಪ್ರಶಸ್ತಿಗಳು ಲಭಿಸಿದ್ದು, ರೋಟರಿ ಸಂಸ್ಥೆಯ ಜಿಲ್ಲಾ ಗೌರ್ನರ್ ಎಸ್.ಗುರುರಾಜ್ ಮತ್ತು ಸಹಾಯಕ ಗೌರ್ನರ್ ಬಿ.ಎನ್.ರಮೇಶ್ ಮೇ 24ರಂದು ಶಿವಮೊಗ್ಗದಲ್ಲಿ ನಡೆದ ಸ್ಫೂರ್ತಿ 2013-14-ಜಿಲ್ಲಾ ಪ್ರಶಸ್ತಿ ಸಮಾರಂಭದಲ್ಲಿ ಇಲ್ಲಿನ ರೋಟರಿ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಹೊಳೆನರಸೀಪುರ ರೋಟರಿ ಸಂಸ್ಥೆಯು ತನ್ನ ಕ್ರಿಯಾಶೀಲ ತಂಡದೊಂದಿಗೆ ಹಮ್ಮಿಕೊಂಡಿದ್ದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗೆ ಹೇಗೆ ಮತ್ತು ಅವುಗಳಿಗೆ ನೀಡುವ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಿಗಾಗಿ-ಪ್ರಥಮ, ಸದಸ್ಯರ ಹೆಚ್ಚಳ ಮಾಡಿದ್ದಕ್ಕಾಗಿ ಪ್ರಶಸ್ತಿ ಸಭಿಸಿದೆ ಎಂದರು.
ನಾಲ್ಕು ಪ್ರಶಸ್ತಿಗಳನ್ನು ಗಳಿಸುವ ಮೂಲಕ ಅಪರೂಪದ ಸಾಧನೆಗೈದಿರುವ ಇಲ್ಲಿನ ರೋಟರಿ ಸಂಸ್ಥೆಯು 2014-15ನೇ ಸಾಲಿನಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಕ್ರಮಗಳ ಸೇವೆಯನ್ನು ಮುಂದುವರಿಸಲಿದೆ ಎಂದು ಪ್ರಶಸ್ತಿ ವಿಜೇತ ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ ತಿಳಿಸಿದ್ದಾರೆ.  ಕಾರ್ಯದರ್ಶಿ ಶಿವಕುಮಾರ್, ತಮ್ಮಯ್ಯ, ವಿಜಯಕುಮಾರ್, ಜೆ.ಟಿ.ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement