ವಿಕಲಚೇತನ ವಿದ್ಯಾರ್ಥಿ ಸಾಧನೆ
ಹಾಸನ: ಆಲೂರು ತಾಲೂಕಿನ ರಾಯರಕೊಪ್ಪಲು ಗ್ರಾಮದ ಬಿಎಸ್ಎನ್ಎಚ್ ವಸತಿಯುತ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಜಿ.ಎಂ. ಮುರಳಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.94 ರಷ್ಟು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. (ಕನ್ನಡ-122, ಇಂಗ್ಲೀಷ್-98, ಹಿಂದಿ-96, ಗಣಿತ-90, ವಿಜ್ಞಾನ-85, ಸಮಾಜ ಪರಿಚಯ-96) ಶಾಲೆಗೆ ಕೀರ್ತಿ ತಂದಿದ್ದಾರೆ. ಮುರಳಿ ವಿಕಲಚೇತನನಾಗಿದ್ದು, ತನ್ನ ಊರು ಬೆಕ್ಕಡಿ ಗ್ರಾಮದಿಂದ 4 ಕಿಮೀ ಬೆಟ್ಟಳ್ಳಿಕೂಡಿಗೆಗೆ ಕಾಲ್ನಡಿಗೆಯಲ್ಲಿ ಬಂದು, ತದನಂತರ ಬೆಟ್ಟಳ್ಳಿಕೂಡಿಗೆಯಿಂದ ರಾಯರಕೊಪ್ಪಲು ಇಲ್ಲಿಗೆ ಬಸ್ಸಿನಲ್ಲಿ ಪ್ರಯಾಣ ಮಾಡಿ ಸಂಜೆ 6.30 ಕ್ಕೆ ಶಾಲೆಯಲ್ಲಿದ್ದು, ಶಿಕ್ಷಕರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.
ಈತನ ತಂದೆ ಮಹೇಶ್ ರೈತರಾಗಿದ್ದು, ಬರುವ ಆದಾಯದಲ್ಲಿಯೇ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವು ಪ್ರಯತ್ನ ಮಾಡಿದ್ದಾರೆ. ಆಲೂರು ತಾಲೂಕಿನ ರಾಯರಕೊಪ್ಪಲು ಬಿಎಸ್ಎನ್ಎಚ್ ಪ್ರೌಢಶಾಲೆಯು ಮಕ್ಕಳಿಗೆ ಉತ್ತಮವಾಗಿ ಶಿಕ್ಷಣ ನೀಡುತ್ತಿದ್ದು, ಇಂತಹ ವಿಕಲಚೇತನ ಮಕ್ಕಳನ್ನು ದಾಖಲಿಸಿಕೊಂಡು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಲು ಶಿಕ್ಷಕರ ಸಹಕಾರ ಕಾರಣ ಎಂದು ಮುರಳಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.