ಹಾವೇರಿ

ಗ್ರಾಮೀಣ ಪ್ರತಿಭೆ ಗುರುತಿಸಿ

ಕನ್ನಡಪ್ರಭ ವಾರ್ತೆ, ಹಾವೇರಿ, ಜ.22
ತಾಲೂಕಿನ ಅಗಡಿ ಗ್ರಾಮದ ಪ್ರಭುಸ್ವಾಮಿ ಮಠದಲ್ಲಿ ಬಸವ ಜಯಂತಿ ಶತಮಾನೋತ್ಸವದ ಅಂಗವಾಗಿ ರುದ್ರಮುನಿ ಸಾಹಿತ್ಯ ಕಲಾವರ್ಧಕ ಸಂಘ ಹಾಗೂ ಸ್ವಾಮಿ ಕಂಪ್ಯೂಟರ್ಸ್ ಜಂಟಿಯಾಗಿ ಗ್ರಾಮೀಣ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ, ಗ್ರಾಮಸ್ಥರಿಗೆ ಹೊಸ ಅನುಭವ ನೀಡಿದರು. ಸ್ಪರ್ಧಾಳುಗಳು ಉತ್ತರಿಸಲು ಕಷ್ಟಪಡುತ್ತಿದ್ದರೇ, ಗೃಹಿಣಿಯರು, ರೈತರು, ವಯೋವೃದ್ಧರು ಉತ್ತರಿಸಿ ಸ್ಫರ್ಧಾಳುಗಳನ್ನೇ ಚಕಿತಗೊಳಿಸಿದರು.
ಮಠದ ಉತ್ತರಾಧಿಕಾರಿಗಳು ಸಿದ್ಧದೇವರು ಸ್ಪರ್ಧೆ ಉದ್ಘಾಟಿಸಿ, ಗ್ರಾಮೀಣ ಪ್ರತಿಭೆಗಳ ಸಾಮಾನ್ಯ ಜ್ಞಾನವನ್ನು ಗುರುತಿಸಿ, ಪ್ರೋತ್ಸಾಹಿಸಲು ಇದೊಂದು ವೇದಿಕೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಾಭಿವೃದ್ಧಿ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ, ಪ್ರೊ. ಬಿ.ವಿ. ಹಿರೇಮಠ, ಡಾ. ಮಹ್ಮದರಫಿ ನದಾಫ್, ಶಂಭಣ್ಣ ಬಸೇಗಣ್ಣಿ ಮಾತನಾಡಿದರು.
ವಿಜೇತರು: ಸಂಗನಬಸವ ತಂಡದ ಸೌಮ್ಯ ಬಸೇಗಣ್ಣಿ, ರಮೇಶ ಬಸೇಗಣ್ಣಿ, ದಯಾನಂದ ನಿರ್ವಾಣಮಠ ಪ್ರಥಮ, ಬಸವೇಶ್ವರ ತಂಡದ ಹೇಮಂತ ಸಣ್ಣಪ್ಪನವರ, ಮಲ್ಲಿಕಾರ್ಜುನ ದೇಸೂರ, ಕೊಟ್ರೇಶ ಬಸೇಗಣ್ಣಿ ದ್ವಿತೀಯ ಹಾಗೂ ಅಕ್ಕಮಹಾದೇವಿ ತಂಡದ ಪರಮೇಶ ವೀರಗೊಂಡ, ಮಂಜುನಾಥ ಇಚ್ಚಂಗಿ, ರಾಕೇಶ ಚಿಂಚಲಿ ತೃತೀಯ ಸ್ಥಾನ ಪಡೆದರು.
ಅಲ್ಲಮಪ್ರಭು ತಂಡದ ಬಿ.ಆರ್. ಸಾಳುಂಕೆ, ವಿಜಯಕುಮಾರ ಜಾಗಟೆ, ಈರಪ್ಪ ಕುರಿ ಹಾಗೂ ಗುರುರುದ್ರಮುನಿ ತಂಡದ ಚೇತನಕುಮಾರ ಯಾದಗುಡೆ, ಶಿವರಾಜ ಚಳ್ಳಮರದ, ಶ್ರೀಕಾಂತ ಪಾಟೀಲ್ ಸಮಾಧಾನಕರ ಸ್ಥಾನ ಪಡೆದರು. ಈ ಕಾರ್ಯಕ್ರಮವನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹನುಮಂತಗೌಡ ಗೊಲ್ಲರ ನಿರ್ವಹಿಸಿದರು. ಬಹುಮಾನ ವಿತರಣೆಯನ್ನು ಗುಡ್ಡದ ಆನ್ವೇರಿಯ ಶಿವಯೋಗೀಶ್ವರ ಶ್ರೀಗಳು ನೆರವೇರಿಸಿದರು. ಈ ಸಂದರ್ಭ ನಾಗರಾಜ ಬಸೇಗಣ್ಣಿ, ಮಲ್ಲಯ್ಯ ನಿರ್ವಾಣಮಠ, ದಿಳ್ಳೇಶ ಮಣ್ಣೂರು, ಎಸ್.ಎಚ್. ಪಟ್ಟಣಶೆಟ್ಟಿ ಪಾಲ್ಗೊಂಡಿದ್ದರು. ಚೈತ್ರಾ ಪ್ರಾರ್ಥಿಸಿದರು. ಕೃಷ್ಣಾ ಜವಳಿ, ಗುಡ್ಡಪ್ಪ ಚಟ್ರಮ್ಮನವರ ನಿರ್ವಹಿಸಿದರು. ಮಹಾಂತೇಶ ಮೂಲಿಮನಿ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!