ರೋಣ: ಸ್ಥಳೀಯ ಬಸನಗೌಡ ಗಿರಡ್ಡಿ ಪ್ರಥಮ ದರ್ಜೆ ಕಾಲೇಜ್ನ 2013-14ನೇ ಸಾಲಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಸಮಾರೋಪ ಸಮಾರಂಭ ಏ. 25ರಂದು ಬೆಳಗ್ಗೆ 10ಕ್ಕೆ ಕಾಲೇಜ್ ಸಭಾಭವನದಲ್ಲಿ ಜರುಗಲಿದೆ. ಪ್ರಾಚಾರ್ಯ ಡಾ. ಎಂ.ವೈ. ಜಟ್ಟೆಣ್ಣವರ ಅಧ್ಯಕ್ಷತೆ ವಹಿಸುವರು. ತಹಸೀಲ್ದಾರ್ ಎ.ಜಿ. ಪಂಡೀತ, ಸಿಪಿಐ ವೆಂಕಟಪ್ಪ ನಾಯಕ, ಜಿಲ್ಲಾ ಬಿಸಿಎಂ ಇಲಾಖೆ ಅಧಿಕಾರಿ ಪ್ರಶಾಂತ ವರಗಪ್ಪನವರ, ಸಹಾಯಕ ಪ್ರಾಧ್ಯಾಪಕ ಅಪ್ಪಣ್ಣ ಹಂಜೆ ಸೇರಿದಂತೆ ಮುಂತಾದವರು ಉಪಸ್ಥಿತರಿರವರು.